ಡ್ರೈ ಫ್ರೂಟ್ಸ್ ಎಂದರೆಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಚಿಕ್ಕ ಮಕ್ಕಳಿಂದ ದೊಡ್ಡವರವರೆಗೂ ಡ್ರೈ ಫ್ರೂಟ್ಸ್ಅನ್ನು ಇಷ್ಟ ಪಟ್ಟು ತಿನ್ನುತ್ತಾರೆ. ಖರ್ಜೂರ ಮರುಭೂಮಿಯ ಬೆಳೆಯಾದರೂ ಹಲವಾರು ಪೋಷಕಾಂಶಗಳನ್ನು ಹೊಂದಿರುವ ಅದ್ಭುತ ಆಹಾರವಾಗಿದೆ.
* ಒಣಗಿದ ಖರ್ಜೂರಗಳಲ್ಲಿ ಕಂಡುಬರುವ ರಂಜಕ, ಪೋಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಮುಂತಾದ ಖನಿಜಗಳು ನಮ್ಮ ಎಲುಬುಗಳನ್ನು ಬಲಪಡಿಸುತ್ತವೆ.
* ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಲು ಖರ್ಜೂರ ಸೇವನೆ ಉತ್ತಮ. ಪ್ರತಿನಿತ್ಯ ಖರ್ಜೂರ ಸೇವನೆಯನ್ನು ರೂಢಿಯಲ್ಲಿಟ್ಟುಕೊಂಡರೆ ಆರೋಗ್ಯವೂ ಸುಧಾರಿಸುತ್ತದೆ. ಜೊತೆಗೆ ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ.
* ಖರ್ಜೂರಗಳನ್ನು ನಿಯಮಿತವಾಗಿ ಸೇವಿಸುವ ಜನರು ಉತ್ತಮ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಹೊಂದಬಹುದಾಗಿದೆ. ಖರ್ಜೂರಗಳಲ್ಲಿ ಕರಗುವ ನಾರಿನಂಶ ಅಧಿಕವಾಗಿದೆ.
* ಒಂದು ಲೋಟ ಹಾಲಿಗೆ ಖರ್ಜೂರದ ಪೇಸ್ಟ್ ಅಥವಾ ಖರ್ಜೂರದ ಚೂರನ್ನು ಹಾಕಿಕೊಂಡು ಸೇವನೆ ಮಾಡುವುದರಿಂದ ತೂಕ ಹೆಚ್ಚಿಸಿಕೊಳ್ಳಬಹುದು.
* ಖರ್ಜೂರ ತೂಕ ನಷ್ಟಕ್ಕೆ ಸಹಾ ಸಹಾಯ ಮಾಡುತ್ತದೆ. ಕರಗುವ ನಾರಿನಂಶವಿದೆ, ಆದರೆ ಈ ನಾರಿನಂಶ ನಿಮಗೆ ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವ ಭಾವನೆ ಮೂಡಿಸುತ್ತವೆ ಹಾಗೂ ಅನಗತ್ಯ ಆಹಾರ ಸೇವನೆಯಿಂದ ತಡೆಯುತ್ತದೆ.
* ಖರ್ಜೂರ ತಿನ್ನುವುದರಿಂದ ಕ್ಯಾನ್ಸರ್ ರಕ್ತ ಕಣಗಳು ಹರಡುವುದನ್ನು ತಡೆಗಟ್ಟಬಹುದಾಗಿದೆ.
* ಖರ್ಜೂರದಲ್ಲಿ ಕಬ್ಬಿಣದಂಶ ಇರುವುದರಿಂದ ರಕ್ತಹೀನತೆಯನ್ನು ತಡೆಗಟ್ಟಬಹುದು.