ನಟ ಉನ್ನಿ ಮುಕುಂದನ್ ಸಿನಿಮಾಗಿಂತ ಹೆಚ್ಚಾಗಿ ಖಾಸಗಿ ಬದುಕಿನ ಬಗ್ಗೆಯೇ ಸುದ್ದಿಯಾಗುತ್ತಿರುತ್ತಾರೆ. ಉನ್ನಿ ಮುಕುಂದನ್ ಮಲಯಾಳಂ ನಟಿ ಅನುಶ್ರೀ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಸ್ವತಃ ಉನ್ನಿ ಮುಕುಂದನ್ ಸ್ಪಷ್ಟನೆ ನೀಡಿದ್ದಾರೆ
ನನ್ನ ಹೆಸರನ್ನು ಆಗಾಗ ಬೇರೆ ನಟಿಯರೊಂದಿಗೆ ಸೇರಿಸಲಾಗುತ್ತದೆ. ವಿಪರ್ಯಾಸವೆಂದರೆ, ಆ ನಟಿಯರೆಲ್ಲಾ ಈಗ ಮದುವೆ ಆಗಿದ್ದಾರೆ. ಹಾಗಾದ್ರೆ ಶೀಘ್ರದಲ್ಲಿಯೇ ಅನುಶ್ರೀ ಕೂಡ ಮದುವೆಯಾಗಬಹುದು ಎಂದು ಟ್ರೋಲಿಗರಿಗೆ ಟಾಂಗ್ ಕೊಟ್ಟಿದ್ದಾರೆ. ಈ ಮೂಲಕ ಅನುಶ್ರೀ ಜೊತೆಗಿನ ಡೇಟಿಂಗ್ ಸುದ್ದಿ ಕೇವಲ ವದಂತಿಯಷ್ಟೇ, ಅದು ನಿಜವಲ್ಲ ಎಂದಿದ್ದಾರೆ.
ಪ್ರತಿ ಎರಡು ತಿಂಗಳಿಗೊಮ್ಮೆ ನನ್ನ ಹೆಸರು ಇತರೆ ನಟಿಯರ ಜೊತೆ ಸೇರಿಕೊಳ್ಳುತ್ತದೆ. ಅನುಶ್ರೀ ಕೂಡ ಆಗಾಗ್ಲೆ ಇಂತಹ ಸುದ್ದಿಗಳನ್ನು ನನಗೆ ಶೇರ್ ಮಾಡುತ್ತಾರೆ. ಈ ರೀತಿಯ ಸುದ್ದಿಗಳಿಂದ ನನ್ನ ವೈಯಕ್ತಿಕ ಬದುಕಿಗೂ ಪರಿಣಾಮ ಬಿರುತ್ತದೆ ಎಂದು ನಟ ಹೇಳಿದ್ದಾರೆ.