ಮೃತ ಪತಿಯ ತಾಯ್ತಂದೆಯರನ್ನು ಆರ್ಥಿಕವಾಗಿ ನೋಡಿಕೊಳ್ಳುವ ಜವಾಬ್ದಾರಿ ಸೊಸೆಯದಲ್ಲ. ಆಕೆ ನೋಡಿಕೊಳ್ಳಲೇಬೇಕೆಂದು ನಿರೀಕ್ಷೆ ಮಾಡುವಂತಿಲ್ಲ. ಮೊನ್ನೆ ಏಪ್ರಿಲ್ 12ರಂದು ಕಿಶೋರ್ ಸಂತ್ ಎನ್ನುವ ಏಕ ಪೀಠದ ನ್ಯಾಯಮೂರ್ತಿ ಹೀಗೆ ತೀರ್ಪು ನೀಡಿದ್ದಾರೆ.
ಏನಿದು ಪ್ರಕರಣ (Case)?
38 ವರ್ಷದ ಶೋಭಾ ತಿಡ್ಕೆ (Shobha Tidke) ಎಂಬುವವರು ಈ ಸಂಬಂಧ ಪ್ರಕರಣ ದಾಖಲಿಸಿದ್ದರು. ಶೋಭಾ ಅವರು ಸ್ಥಳೀಯ ಗ್ರಾಮಪೀಠದ (Local Court) ಆದೇಶದ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದರು. ಸ್ಥಳೀಯ ನ್ಯಾಯಪೀಠ ಅವರಿಗೆ ಪತಿಯ ಪಾಲಕರ (Parents) ನಿರ್ವಹಣೆಗೆ ಹಣ ನೀಡುವಂತೆ ಸೂಚನೆ ನೀಡಿತ್ತು. ಆದರೆ, ಶೋಭಾ ಅವರು ಆರ್ಥಿಕವಾಗಿ (Economically) ಇದು ಕಾರ್ಯಸಾಧುವಲ್ಲದ ಹಿನ್ನೆಲೆಯಲ್ಲಿ ತೀರ್ಪಿನ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದರು.
ಶೋಭಾ ಪತಿ ಮಹಾರಾಷ್ಟ್ರ (Maharashtra) ಸಾರಿಗೆ ಸಂಸ್ಥೆಯ ಉದ್ಯೋಗಿಯಾಗಿದ್ದರು ಹಾಗೂ ಸೇವೆಯಲ್ಲಿರುವಾಗಲೇ ಮೃತ (Dead) ಪಟ್ಟಿದ್ದರು. ರೋಗಗ್ರಸ್ತ ಪತಿಯ (Husband) ನಿಧನಾನಂತರ ಶೋಭಾ ಅವರು ಮುಂಬೈನ ಜೆಜೆ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಶೋಭಾಳ ಅತ್ತೆ–ಮಾವ (In Laws) ಮಗ ತೀರಿಕೊಂಡ ಮೇಲೆ ತಮಗೆ ಹಣಕಾಸಿನ ನೆರವು ಇಲ್ಲವಾಗಿದ್ದು, ಸೊಸೆ (Daughter in Law) ದೈನಂದಿನ ನಿರ್ವಹಣೆಗೆ ಹಣ ನೀಡಬೇಕೆಂದು ಆಗ್ರಹಿಸಿ ನ್ಯಾಯಾಂಗದ ಮೊರೆ ಹೋಗಿದ್ದರು.
ಆದರೆ, ಶೋಭಾ ಪ್ರಕಾರ, ಆಕೆಯ ಅತ್ತೆ–ಮಾವ ಊರಿನಲ್ಲಿ ಸ್ವಂತ ಮನೆ ಹಾಗೂ ಜೀವನ ನಿರ್ವಹಣೆಗೆ ಜಮೀನು ಹೊಂದಿದ್ದಾರೆ. ಹಾಗೂ ಪತಿ ನಿಧನವಾದ ಸಮಯದಲ್ಲಿ ದೊರೆತ 1.88 ಲಕ್ಷ ರೂಪಾಯಿ ಪರಿಹಾರ (Compensation) ಪಡೆದುಕೊಂಡಿದ್ದಾರೆ. ಹೀಗಾಗಿ, ಅವರಿಗೆ ಜೀವನ ನಿರ್ವಹಣೆಗೆ (Life Maintenance) ಸಮಸ್ಯೆ ಇಲ್ಲ ಎನ್ನುವುದನ್ನು ಸಾಬೀತುಪಡಿಸಿದರು.
ನ್ಯಾಯಪೀಠ ಹೇಳಿದ್ದೇನು?
ಶೋಭಾ ಪತಿ ಕೆಲಸ ಮಾಡುತ್ತಿದ್ದುದು ಸರ್ಕಾರಿ (Government) ಸಾರಿಗೆ ನಿಗಮದಲ್ಲಿ. ಆದರೆ, ಪತಿಯ ನಿಧನದ (Death) ಬಳಿಕ ಶೋಭಾಗೆ ದೊರಕಿರುವುದು ಆರೋಗ್ಯ (Health) ಇಲಾಖೆಯ ಆಸ್ಪತ್ರೆಯಲ್ಲಿ. ಹೀಗಾಗಿ, ಇದು ಪರಿಹಾರದ ಆಧಾರದಲ್ಲಿ ನೀಡಿರುವ ಬದಲಿ ಉದ್ಯೋಗವಲ್ಲ ಎನ್ನುವುದನ್ನು ಹೈಕೋರ್ಟ್ ಗುರುತಿಸಿತು. ಜತೆಗೆ, ಮಗ ಸತ್ತಾಗ ಪರಿಹಾರ ಹಣವನ್ನು ಪಾಲಕರೇ ಪಡೆದುಕೊಂಡಿದ್ದು,
ಜೀವನ ನಿರ್ವಹಣೆಗೆ ಕೃಷಿ ಜಮೀನು ಹೊಂದಿರುವುದನ್ನು ಪರಿಗಣಿಸಿತು. ಹೀಗಾಗಿ, ಸೊಸೆಯಿಂದ ಜೀವನ ಸಾಗಿಸಲು ಹಣ ಕೇಳುವುದು ಸರಿಯಲ್ಲ. ಸೊಸೆ ಇದಕ್ಕೆ ಬಾಧ್ಯಸ್ಥಳಲ್ಲ ಎಂದು ತೀರ್ಪು ನೀಡಿತು. ಕೋಡ್ ಆಫ್ ಕ್ರಿಮಿನಲ್ ಪ್ರೊಸೀಜರ್ ನ 125ನೇ ಸೆಕ್ಷನ್ ಪ್ರಕಾರ, ಪತಿಯ ತಂದೆ ಮತ್ತು ಪತಿಯ ಅಮ್ಮ ಈ ವ್ಯಾಪ್ತಿಗೆ ಸೇರುವುದಿಲ್ಲ ಎಂದು ಹೇಳಿದೆ. ಈ ತೀರ್ಪು ಇದೀಗ ಹಲವು ಪ್ರಕರಣಗಳಿಗೆ ಆಧಾರವಾಗುವ (Base) ಸಾಧ್ಯತೆ ಹೆಚ್ಚಾಗಿದೆ. ಏಕೆಂದರೆ, ಇಂತಹ ಪ್ರಕರಣಗಳು ದೇಶದಾದ್ಯಂತ ಸಾಕಷ್ಟು ಪ್ರಮಾಣದಲ್ಲಿವೆ.