ಕಳೆದ ಮೂರು ನಾಲ್ಕು ವರ್ಷಗಳ ಹಿಂದೆ ಆರಂಭವಾಗಿದ್ದ ಗ್ರಾಮಾಯಣ ಸಿನಿಮಾಗೆ ಮತ್ತೆ ಚಾಲನೆ ಸಿಕ್ಕಿದೆ. ಇದೇ 8ರಂದು ಬೆಂಗಳೂರಿನ ಬಂಡಿ ಮಹಾಕಾಳಿ ದೇವಸ್ಥಾನದಲ್ಲಿ ಮುಹೂರ್ತ ಸಮಾರಂಭ ನಡೆಯದ್ದು, ಸಮಾರಂಭಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅತಿಥಿಯಾಗಿ ಆಗಮಿಸಲಿದ್ದಾರೆ.
ಇವರ ಜೊತೆಗೆ ನಟರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್, ನಟರಾದ ದುನಿಯಾ ವಿಜಯ್, ಧ್ರುವ ಸರ್ಜಾ, ಉಪೇಂದ್ರ, ಡಾಲಿ ಧನಂಜಯ್, ಶ್ರೀಮುರಳಿ, ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.
‘ಸಿದ್ಧಾರ್ಥ್’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ವಿನಯ್ ರಾಜ್ಕುಮಾರ್ ಇತ್ತೀಚಿಗೆ ಹೊಸ ರೀತಿಯ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ‘ಗ್ರಾಮಾಯಣ’ ಚಿತ್ರದ ವಿಚಾರವಾಗಿ ನಟ ವಿನಯ್ ಸುದ್ದಿಯಲ್ಲಿದ್ದಾರೆ. ಈ ಹೆಸರು ಕೇಳಿದ ತಕ್ಷಣ ಹಲವರಿಗೆ ಇದು ಈಗಾಗಲೇ ಆರಂಭವಾಗಿರುವ ಸಿನಿಮಾವಲ್ಲವೇ ಎಂಬ ಪ್ರಶ್ನೆ ಮೂಡುತ್ತದೆ. ಹೌದು, ‘ಗ್ರಾಮಾಯಣ’ ಸಿನಿಮಾ ಆರಂಭವಾಗಿ ಮೂರ್ನಾಲ್ಕು ವರ್ಷಗಳಾಗಿವೆ. ಆದರೆ ಹಲವು ಕಾರಣಗಳಿಂದ ನಿಂತು ಹೋಗಿದ್ದ ಚಿತ್ರವನ್ನು ಖ್ಯಾತ ನಿರ್ಮಾಪಕ ಕೆ.ಪಿ ಶ್ರಿಕಾಂತ್ ಅವರು ಲಹರಿ ಫಿಲ್ಮ್ಸ್ ಮನೋಹರ್ ನಾಯ್ಡು ಜೊತೆಗೆ ಸೇರಿ ಆರಂಭಿಸುತ್ತಿದ್ದಾರೆ. ‘ಯುಐ’ ಸಿನಿಮಾದ ನಂತರ ಶ್ರಿಕಾಂತ್ ಮತ್ತು ಮನೋಹರ್ ನಾಯ್ಡು ನಿರ್ಮಾಣ ಮಾಡುತ್ತಿರುವ ಎರಡನೇ ಸಿನಿಮಾ ಇದಾಗಿದೆ.
ದೇವನೂರು ಚಂದ್ರು ನಿರ್ದೇಶನದ ‘ಗ್ರಾಮಾಯಣ’ ಸಿನಿಮಾ ಒಂದೇ ಒಂದು ಟೀಸರ್ನಿಂದ ಹಲವರ ಗಮನ ಸೆಳೆದಿತ್ತು. ಕೋವಿಡ್ನಿಂದ ಮತ್ತು ಹಲವು ಕಾರಣಗಳಿಂದ ಸಿನಿಮಾ ಅರ್ಧಕ್ಕೆ ನಿಂತು ಹೋಗಿತ್ತು. ಇದೀಗ ಹೊಸದಾಗಿ ಚಿತ್ರವನ್ನ ಶುರುವಾಗದೆ.