ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಇಂದು ಅಶ್ವಿನಿ ಪುನೀತ್ ರಾಜಕುಮಾರ್ ಅವರು ಭೇಟಿ ಮಾಡಿದ್ದಾರೆ. ಬೆಂಗಳೂರಿನ ಸದಾಶಿವ ನಗರದ ಡಿಕೆಶಿ ನಿವಾಸಕ್ಕೆ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರ ಜೊತೆ ರಾಘವೇಂದ್ರ ರಾಜ್ ಕುಮಾರ್ ಕೂಡ ಭೇಟಿ ನೀಡಿದರು.
ಈ ವೇಳೆ ರಾಜ್ಯದ ನೂತನ ಉಪಮುಖ್ಯಮಂತ್ರಿಯಾಗಿರುವ ಡಿಕೆಶಿ ಅವರಿಗೆ ಅಶ್ವಿನಿ ಮತ್ತು ರಾಘಣ್ಣ ಶುಭ ಕೋರಿದ್ದಾರೆ. ಈ ಬಾರಿಯ 2023 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಶಿವರಾಜ್ ಕುಮಾರ್ ದಂಪತಿ ಪ್ರಚಾರ ಮಾಡಿದ್ದರು.
ಅದರಂತೆ ರಾಜ್ಯದಲ್ಲಿ ಬಹು ಮತಗಳ ಅಂತರದಿಂದ ಕಾಂಗ್ರೆಸ್ ಗೆಲುವು ಸಾಧಿಸಿರುವ ಹಿನ್ನೆಲೆ ಇಂದು ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಡಿಸಿಎಂ ಅವರ ನಿವಾಸಕ್ಕೆ ಅಶ್ವಿನಿ ಎಂಟ್ರಿ ನೀಡಿದ ವಿಡಿಯೋ ಕೂಡ ಲಭ್ಯವಾಗಿದೆ.