ಬೆಂಗಳೂರು:ನಾಡಿನ ಸಮಸ್ತ ಜನತೆಗೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿದ್ದಾರೆ.
ವಿಶ್ವದೆಲ್ಲೆಡೆ ಇರುವ ಎಲ್ಲಾ ಕನ್ನಡಿಗರಿಗೂ 69ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ಕನ್ನಡ ಎಂದರೆ ಕೇವಲ ಭಾಷೆಯಷ್ಟೆಯಲ್ಲ. ಅದು ನಮ್ಮ ಉಸಿರು, ಪರಂಪರೆ, ಭಾವನೆ, ಹೆಮ್ಮೆ ಮತ್ತು ಶಕ್ತಿ. ಕನ್ನಡ ನಮ್ಮೆಲ್ಲರ ಸ್ವಾಭಿಮಾನ ಮತ್ತು ಗೌರವದ ಸಂಕೇತ ಎಂದು ಶಿವಕುಮಾರ್ ಅವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನವೆಂಬರ್ 1 ಇಡೀ ವಿಶ್ವದೆಲ್ಲೆಡೆ ಇರುವ ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆಯಿಂದ ಕನ್ನಡಾಂಬೆಯನ್ನು ಸಂಭ್ರಮಿಸುವ ದಿನ. ಕನ್ನಡ ಭಾಷೆ ಮೇಲಿನ ನಮ್ಮ ಕಾಳಜಿ ಪ್ರೀತಿ ಈ ಒಂದು ದಿನಕ್ಕೆ ಸೀಮಿತವಾಗುವುದು ಬೇಡ. ಇಡೀ ವರ್ಷ ಕನ್ನಡ ಭಾಷೆ ಬಳಸಿ, ಬೆಳೆಸೋಣ. ವಿಶ್ವದೆಲ್ಲೆಡೆ ಕನ್ನಡದ ಕಂಪು ಪಸರಿಸೋಣ ಎಂದು ಅವರು ತಿಳಿಸಿದ್ದಾರೆ.
ತಾಯಿ ಭುವನೇಶ್ವರಿ ಆಶೀರ್ವಾದದೊಂದಿಗೆ ರಾಜ್ಯದಲ್ಲಿ ಮುಂದಿನ ವರ್ಷವೂ ಮಳೆ, ಬೆಳೆ ಸಮೃದ್ಧವಾಗಲಿ. ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಐಶ್ವರ್ಯವಂತರಾಗಿ, ಶಾಂತಿ, ನೆಮ್ಮದಿಯ ಬದುಕು ನಡೆಸುವಂತಾಗಲಿ ಎಂದು ಶಿವಕುಮಾರ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.