–ಗೃಹ ಸಚಿವ ಕ್ಷೇತ್ರ ಕೊರಟಗೆರೆಯಲ್ಲಿ ಪುಂಡರ ಹಾವಳಿ ಮಿತಿಮೀರಿದೆ. ದಾರಿ ಬಿಡಿ ಎಂದು ಕೇಳಿದ್ದಕ್ಕೆ ಸೈನಿಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಜರುಗಿದೆ.
ಘಟನೆ ಹಿನ್ನೆಲೆ ಸೈನಿಕ ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾರೆ. ಕೊರಟಗೆರೆ ತಾಲೂಕಿನ ಬೈರೇನಹಳ್ಳಿ ಕ್ರಾಸ್ ಬಳಿ ಘಟನೆ ಜರುಗಿದೆ.
ಬೈರೇನಹಳ್ಳಿ ಕ್ರಾಸ್ ಬಳಿ ದಾರಿಗೆ ಅಡ್ಡಲಾಗಿ ನಿಂತವರನ್ನು ದಾರಿ ಬಿಡಿ ಎಂದು ಯೋಧ ಗೋವಿಂದರಾಜು(30) ಕೇಳಿದ್ದಾರೆ. ಇದಕ್ಕೆ ಕೆರಳಿದ 5 ಜನರ ಪುಂಡರ ಗುಂಪು ಗೋವಿಂದರಾಜು ಬಳಿ ಜಗಳ ತೆಗೆದು ಹಲ್ಲೆ ಮಾಡಿದ್ದಾರೆ.
ಕುಡಿದ ಮತ್ತಿನಲ್ಲಿದ್ದ ಪುಂಡರು ಮದ್ಯದ ಬಾಟಲಿಗಳಿಂದ ಯೋಧ ಗೋವಿಂದರಾಜು ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಿದ್ದಾರೆ.
ಕೊರಟಗೆರೆ ತಾಲ್ಲೂಕಿನ ಅರಸಾಪುರದ ಭರತ್ (29), ಮಧುಗಿರಿ ತಾಲ್ಲೂಕಿನ ಕೊಡಗದಾಲದ ಪುನೀತ (32), ಹುಣಸವಾಡಿಯ ಗೌರಿಶಂಕರ (32), ಶಿವಾ (32), ಕೊಡಿಗೇನಹಳ್ಳಿ ಸಮೀಪದ ಭಟ್ಟಗೆರೆಯ ದಿಲೀಪ್ (35) ಎಂಬ ಪುಂಡರಿಂದ ಹಲ್ಲೆ ನಡೆದಿದೆ. ಘಟನೆ ಹಿನ್ನೆಲೆ ಪುನೀತ ಹಾಗೂ ಭರತ್ನನ್ನು ಪೊಲೀಸರು ಬಂಧಿಸಿದ್ದಾರೆ.
ಯೋಧ ಗೋವಿಂದರಾಜು ಜಮ್ಮುಕಾಶ್ಮಿರದ ಭಾರತೀಯ ಭೂಸೇನೆ ಸಿಪಾಯಿಯಾಗಿ ರಜೌರಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ..ಯ ರಜೆಯ ಮೇಲೆ ತಮ್ಮ ಊರು ರಾಯವಾರಕ್ಕೆ ಬಂದಿದ್ದರು ಬಂದಿದ್ದರುಕೆಲಸದ ನಿಮಿತ್ತ ಬೇರೇನಹಳ್ಳಿ ಕ್ರಾಸ್ಗೆ ಹೋಗಿದ್ದರು. ಹಲವು ಕ್ರೈಂ ಗಳಿಗೆ ಭೈರೇನಹಳ್ಳಿ ಕ್ರಾಸ್ ಸಾಕ್ಷಿಯಾಗಿದೆ.
ಈ ಮುಂಚೆ ಕಾರ್ ಹಾರನ್ ಹೊಡೆದ ವಿಚಾರಕ್ಕೆ ವ್ಯಕ್ತಿಯ ಮೇಲೆ ಚಾಕು ಇರಿಯಲಾಗಿತ್ತು. ಆ ಘಟನೆ ಮಾಸುವ ಮುನ್ನವೆ ಗೃಹ ಸಚಿವ ಪರಮೇಶ್ವರ್ ಮೇಲೆ ಕಲ್ಲು ತೂರಲಾಗಿತ್ತು..ಸಧ್ಯ ಐವರ ಮೇಲೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ