ಬೆಂಗಳೂರು:- ವಿದ್ಯಾರಣ್ಯಪುರದ ಬಾರ್ನಲ್ಲಿ ಡೆಡ್ಲಿ ಮರ್ಡರ್ ಅಟ್ಯಾಕ್ ನಡೆದಿದೆ. ಕೇವಲ 20ರೂಪಾಯಿಗೆ ಕಿಡಿಗೇಡಿಗಳು ಕ್ಯಾಷಿಯರ್ ಗೆ ಚಾಕು ಇರಿದಿದ್ದು, ಇದೀಗ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.
ಚೇತನ್ ಹಾಗು ಕಾರ್ತಿಕ್ ಬಂಧಿತ ಆರೋಪಿಗಳು ಎನ್ನಲಾಗಿದೆ. ಮತ್ತೋರ್ವ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ.
ವಿದ್ಯಾರಣ್ಯಪುರ ನರಸೀಪುರದ ಜಯಶ್ರೀ ಬಾರ್ನಲ್ಲಿ ಕುಡಿಯಲು ಬಂದಿದ್ದ ಚೇತನ್, ಕಾರ್ತಿಕ್ ಹಾಗೂ ಮತ್ತೋರ್ವ ವ್ಯಕ್ತಿ ಸೇರಿ ಮೂವರು ಗಲಾಟೆ ಮಾಡಿಕೊಂಡಿದ್ದಾರೆ. ಬಾರ್ ಕ್ಯಾಷಿಯರ್ 20 ರೂಪಾಯಿ ಹೆಚ್ಚಿಗೆ ಬಿಲ್ ಹಾಕಿದ ಎಂಬ ಕಾರಣಕ್ಕೆ ಚಾಕು, ಬಾಟಲ್ನಿಂದ ಕ್ಯಾಷಿಯರ್ ರಂಜಿತ್ ಎಂಬಾತನ ಮೇಲೆ ಮೂವರು ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ. ಈ ವೇಳೆ ಚಾಕು ಇರಿತವೂ ಆಗಿದೆ. ಘಟನೆ ಸಂಬಂಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಕೊಲೆಗೆ ಯತ್ನಿಸಿದ ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೋರ್ವ ಎಸ್ಕೇಪ್ ಆಗಿದ್ದು, ಆತನಿಗಾಗಿ ಶೋಧ ಮುಂದುವರಿದಿದೆ.