ಜ್ಯೂವೆಲ್ಲರಿ ಶಾಪ್ ಮಾಲೀಕರೇ ಎಚ್ಚರ.. ಆನ್ ಲೈನ್ ಮುಖಾಂತರ ಹಣ ಪಾವತಿಸಿದ್ದೇನೆಂದು ವಂಚನೆ ಮಾಡುವವರು ಇದ್ದಾರೆ

ಬೆಂಗಳೂರು

ಬೆಂಗಳೂರು: ಬ್ಯಾಂಕ್ ನಿಂದ ಬಂದಂತೆ ಮೆಸೆಜ್ ಮಾಡಿ ಆನ್ ಲೈನ್ ಮುಖಾಂತರ ಹಣ ಪಾವತಿಸಿದ್ದೇನೆಂದು ಜ್ಯುವೆಲ್ಲರಿ ಶಾಪ್ ಮಾಲೀಕನಿಗೆ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕಾರ್ತಿಕ ಎಂಬಾತನಿಂದ ಈ ವಂಚನೆ ಎಸಗಲಾಗಿದೆ. ಗೋವಿಂದರಾಜನಗರದ ಬಳಿ ಇರುವ ಜ್ಯೂವೆಲ್ಲರಿ ಶಾಪ್ ನಲ್ಲಿ ದೂರುದಾರನ ತಂದೆ ಪಾರಸ್ಮಾಲ್ ಜೈನ್ ಅವರು ಇದ್ದ ವೇಳೆ ಉಂಗುರ ಖರೀದಿ ಮಾಡಲು ಆರೋಪಿ ಬಂದಿದ್ದ. ಉಂಗುರ ಪಡೆದ ನಂತರ ಆನ್ ಲೈನ್ ಪೇಮೆಂಟ್ ಮಾಡ್ತಿನಿ ಎಂದು ಪಾರಸ್ಮಲ್ ಜೈನ್ ಅವರ ನಂಬರ್ ಪಡೆದಿದ್ದ. ನಂತರ ಹಣ ಕಡಿತವಾದರೆ,

ಬರುವ ಮೆಸೇಜನ್ನ ಕಾಪಿ ಮಾಡಿಕೊಂಡು ಅದರಲ್ಲಿ 19000 ಸಾವಿರ ಎಂದು ನಮೂದಿಸಿ ಆರೋಪಿ ಕಾರ್ತಿಕ್ ತಾನೇ ಮೆಸೇಜ್ ಕಳಿಸಿದ್ದ. Credited 19000  ಎಂದು ಬಂದ ಹಿನ್ನೆಲೆ ಹಣ ಬಂದಿರಬಹುದೆಂದು ಪಾರಾಸ್ಮಲ್ ಅಂದುಕೊಂಡಿದ್ದಾರೆ. ಅಕೌಂಟ್ ಚೆಕ್ ಮಾಡುವಾಗ ಎರಡೆರಡು ದಿನಾಂಕ ಇದ್ದ ಹಿನ್ನೆಲೆ ಅನುಮಾನಗೊಂಡಿದ್ದ ಭಾವಿಕ್, ಪರಿಶೀಲಿಸಿದಾಗ ವಂಚನೆ ಎಸಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಮಾಗಡಿ ರಸ್ತೆ ಪೊಲೀಸರಿಗೆ ಭಾವಿಕ್ ದೂರು ನೀಡಿದ್ದಾರೆ. ದೂರಿನ ಅನ್ವಯ ಹಾಗೂ ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.