ದರ್ಶನ್ ಹಾಗೂ ಸಂಗಡಿಗರಿಂದ ಭೀಕರವಾಗಿ ಹತ್ಯೆಯಾದ ರೇಣುಕಾಸ್ವಾಮಿ ಅವರ ಮರಣೋತ್ತರ ಪರೀಕ್ಷೆಯ ರಿಪೋರ್ಟ್ ಸಿಕ್ಕಿದೆ. ರಿಪೋರ್ಟ್ ನಲ್ಲಿ ರೇಣುಕಾಸ್ವಾಮಿ ಸಾಕಷ್ಟು ಹಿಂಸೆಯಿಂದ ಮೃತಪಟ್ಟಿರುವುದು ಗೊತ್ತಾಗಿದೆ.
ಕೊಲೆ ಆಗಿರುವ ರೇಣುಕಾಸ್ವಾಮಿ ದೇಹದ ಯಾವ್ಯಾವ ಭಾಗಗಳಲ್ಲಿ ರಕ್ತ ಬಂದಿದೆ. ದೇಹದಲ್ಲಿ ಎಲ್ಲೆಲ್ಲಿ ಗಾಯಗಳು ಆಗಿದ್ದವು? ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಲು ಯಾವ್ಯಾವ ವಸ್ತುಗಳನ್ನು ಬಳಸಿದ್ದರು ಎನ್ನುವುದು ಗೊತ್ತಾಗಿದೆ. ಮರ್ಮಾಂಗದ ಮೇಲೆ ಹಲ್ಲೆ ಮಾಡಿರೋದು ಮರಣೋತ್ತರ ಪರೀಕ್ಷೆಯಲ್ಲಿ ದೃಢವಾಗಿದೆ.
ರೇಣುಕಾಸ್ವಾಮಿಯ ಮರ್ಮಾಂಗಕ್ಕೆ ಹೊಡೆದಿರೋದು ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಗಿದ್ದು ಆ ಭಾಗದಲ್ಲಿ ರಕ್ತ ಸೋರಿಕೆಯಾಗಿದೆ. ಮರದ ಪೀಸ್ನಿಂದ ಹೊಡೆದಿದ್ದಕ್ಕೆ ಹೊಟ್ಟೆಯ ಭಾಗದಲ್ಲೂ ರಕ್ತ ಚಿಮ್ಮಿದೆ. ತಲೆಗೆ ಹೊಡೆದಿದ್ದಾರೆ ಆದರೆ ರಕ್ತ ಸೋರಿಕೆಯಾಗಿಲ್ಲ. ಬೆನ್ನಿಗೆ, ಕೈ, ಕಾಲುಗಳಲ್ಲಿ, ಎದೆ ಭಾಗದಲ್ಲೂ ರಕ್ತ ಬಂದಿದೆ. ದೇಹಕ್ಕೆ ಆಘಾತವಾಗಿ ರಕ್ತ ಹೆಪ್ಪುಗಟ್ಟಿ ಸಾವಾಗಿದೆ. ಹಲ್ಲೆ ಮಾಡಿ ಹತ್ಯೆ ಮಾಡುವಾಗ ಮರದ ಪೀಸ್, ಬೆಲ್ಟ್ ಅನ್ನು ಬಳಸಿದ್ದಾರೆ. ದೇಹದಲ್ಲಿ 15 ಕಡೆಗಳಲ್ಲಿ ಗಂಭೀರವಾದ ಗಾಯಗಳಾಗಿವೆ. ಇನ್ನು ಕೊಲೆ ಮಾಡಿ ಮೃತದೇಹ ಬಿಸಾಕಿದ್ದರಿಂದ ಮುಖ ಮತ್ತು ದವಡೆಯನ್ನ ನಾಯಿಗಳು ಕಿತ್ತು ತಿಂದಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಗಿದೆ.