ನವದೆಹಲಿ : ಇಸ್ರೇಲ್-ಹಮಾಸ್ ನಡುವೆ ನಡೆಯುತ್ತಿರುವ ಯದ್ಧ ಮುಂದುವರೆದಿದ್ದು ಕದನ ವಿರಾಮ ಘೋಷಣೆಯ ಕುರಿತು ಮಾತುಕತೆ ನಡೆಯುತ್ತಿದೆ. ಈ ಮಧ್ಯೆ ಗಾಝಾದಲ್ಲಿ ನೆರವಿಗಾಗಿ ಕಾಯುತ್ತಿದ್ದ ಜನರ ಮೇಲೆ ನಡೆದ ದಾಳಿಯನ್ನು ಭಾರತ ಖಂಡಿಸಿದ್ದು, ಸಹಾಯಕ್ಕಾಗಿ ಕಾಯುತ್ತಿದ್ದ 112 ಜನರ ಸಾವು ದುರಂತ ಎಂದು ಭಾರತ ವಿಷಾಯ ವ್ಯಕ್ತಪಡಿಸಿದೆ.
ಜೆರುಸಲೇಂ. ಗಾಝಾದಲ್ಲಿ ಮಾನವೀಯ ನೆರವಿನ ನಿರೀಕ್ಷೆಯಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ 112 ಕ್ಕೂ ಹೆಚ್ಚು ಫೆಲೆಸ್ತೀನೀಯರು ಸಾವನ್ನಪ್ಪಿದ ಘಟನೆಯ ಬಗ್ಗೆ ವಿಶ್ವಸಂಸ್ಥೆ ಮತ್ತು ಅಂತರರಾಷ್ಟ್ರೀಯ ಸಮುದಾಯ ತೀವ್ರ ದುಃಖ ವ್ಯಕ್ತಪಡಿಸಿದೆ.
ಮಾನವೀಯ ನೆರವಿಗಾಗಿ ಕಾಯುತ್ತಿದ್ದ 112 ಜನರು ಗುರುವಾರ ಮೃತಪಟ್ಟಿರುವುದು ದುರಂತ ಎಂದು ಭಾರತದ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ. “ಗಾಝಾದಲ್ಲಿ ಮುಂದುವರಿದ ನಾಗರಿಕ ಸಾವುಗಳು ಮತ್ತು ಮಾನವೀಯ ಪರಿಸ್ಥಿತಿ ಕಳವಳಕಾರಿಯಾಗಿದೆ” ಎಂದಿದ್ದಾರೆ.
ಈ ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಅಮೆರಿಕ ಮತ್ತು ಜರ್ಮನಿ ಆಗ್ರಹಿಸಿವೆ. ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇಸ್ರೇಲಿ ಸೈನಿಕರ ಈ ಕೃತ್ಯದ ವಿರುದ್ಧ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ. ಬ್ರೆಜಿಲ್ ಕೂಡ ಈ ಕ್ರಮವನ್ನು ಇಸ್ರೇಲ್ನ ನೈತಿಕ ಮತ್ತು ಕಾನೂನು ವ್ಯಾಪ್ತಿಯಿಂದ ಹೊರಗಿದೆ ಎಂದಿದ್ದಾರೆ.