ಬೆಂಗಳೂರು: ರಾತ್ರಿ ಪಾಳಿ ಕೆಲಸ ಮುಗಿಸಿ ಮನೆಗೆ ತೆರಳಿ ಮಲಗಿದ್ದ ಹಲಸೂರು ಗೇಟ್ ಠಾಣೆಯ(Halasur Gate Station) ಎಎಸ್ಐ ಸಾವನ್ನಪ್ಪಿರುವ ಘಟನೆ ಜರುಗಿದೆ. ಆನಂದ್ ಕುಮಾರ್ ಮೃತ ಎಎಸ್ಐ ಎಂದು ಗುರುತಿಸಲಾಗಿದೆ. ಆನಂದ್ ಕುಮಾರ್ ಅವರು, ನಿನ್ನೆ ರಾತ್ರಿ ಪಾಳಿ ಕೆಲಸ ಮಾಡಿ ಮನೆಗೆ ತೆರಳಿ ಮಲಗಿದ್ದರು. ಅವರನ್ನು ಮನೆಯವರು ಏಳಿಸಲು ಮನೆಯವರು ಪ್ರಯತ್ನ ಮಾಡಿದ್ದಾರೆ.
ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗದಿದ್ದಾಗ ಕೂಡಲೇ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪರೀಕ್ಷಿಸಿದ ವೈದ್ಯರು ಹೃದಯಾಘಾತದಿಂದ ಮಲಗಿದ್ದಾಗಲೇ ಆನಂದ್ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದಾರೆ. ಆನಂದ್ ಅವರು ನಾಗರಭಾವಿ ಬಳಿಯ ಮನೆಯಲ್ಲಿ ಕೊನೆಯುಸಿರೆಳೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಲ್ಲದೇ ಪೊಲೀಸ್ ಇಲಾಖೆ ಆನಂದ್ ಕುಮಾರ್ ಅವರ ನಿಧನಕ್ಕೆ ಸಂತಾಪ ಸೂಚಿಸಿದೆ.