ಬಳ್ಳಾರಿ: ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದಕ್ಕೆ ಯುವತಿಯೊಬ್ಬಳು ಕಳೆದ ನಾಲ್ಕು ದಿನಗಳ ಹಿಂದೆ, ಆತ್ಮಹತ್ಯೆಗೆ ಯತ್ನ ಮಾಡಿದ್ದು, ಇಂದು ಚಿಕಿತ್ಸೆ ಸ್ಪಂದಿಸದ ಕಾರಣ ಯುವತಿ ಇಂದು ಅಸುನೀಗಿದ್ದಾಳೆ. ನಾಲ್ಕು ದಿನಗಳ ಕಾಲ ಸಾವು ಬದುಕಿನ ಮಧ್ಯೆ ಹೋರಾಟ ಮಾಡ್ತಿದ್ದ ಬಳ್ಳಾರಿಯ ಅಮೃತ ಇಂದು ಸಾವಿಗೀಡಾಗಿದ್ದಾಳೆ. ಪ್ರೀತಿಸಿದ್ದ ಯುವಕ ಸುನೀಲ್ ಅಮೃತಾಳನ್ನ ಎಲ್ಲ ರೀತಿಯಲ್ಲೂ ಬಳಸಿಕೊಂಡು ಬಳಿಕ ಮದುವೆ ತಿರಸ್ಕರಿದ್ದ.
ಅಮೃತಾ ಆತ್ಮಹತ್ಯೆಗೂ ಮುನ್ನ ತನಗೆ ಕೈ ಕೊಟ್ಟ ಪ್ರೇಮಿಯ ಮೋಸದ ಕತೆಯ ಪತ್ರದ ಮೂಲಕ ಬರೆದಿಟ್ಟಿದ್ದಳು. ಅಮೃತ ಪಿಯುಸಿ ಮುಗಿದ ಬಳಿಕ ಸ್ನೇಹಿತೆಯ ಗಂಡನ ಸಹೋದರನ ಸುನೀಲ್ ಜೊತೆ ಪರಿಚಯವಾಗಿತ್ತು. ಪರಿಚಯದ ಬಳಿಕ ಪ್ರೀತಿ ಪ್ರೇಮ ಪ್ರಣಯ ಎಲ್ಲ ನಡೆದ ಬಳಿಕ ಮದುವೆ ಯಾಗಲು ಜಾತಿ ಬೇರೆ ಎಂದು ಸುನೀಲ್ ನಿರಾಸಕರಿಸಿದ್ದ.
ಮದುವೆ ನಿರಾಕರಣೆ ಮಾಡಿದ ಹಿನ್ನಲೆ ನೇಣಿಗೆ ಶರಣಾಗಿದ್ದ ಅಮೃತ, ಕೊನೆಯ ಕ್ಷಣದಲ್ಲಿ ನೇಣಿನಿಂದ ಇಳಿಸಿ ಬದುಕಿಸಲು ಸಾಕಷ್ಟು ಪ್ರಯತ್ನ ಮಾಡಿದ್ರು ಕೊನೆಗೆ ಸಾವನ್ನಪ್ಪಿದ್ದಾಳೆ. ಅಮೃತ (ವಡ್ಡರ) ತಳ ಸಮುದಾಯಕ್ಕೆ ಸೇರಿದ ಯುವತಿಯೆಂದು ಸುನೀಲ್ (ಬಲಿಜ) ಮೇಲ್ಜಾತಿಗೆ ಸೇರಿದ್ದವರೆಂದು ಮದುವೆ ಬೇಡ ಎಂದಿದ್ದ ಎಂದು ಆರೋಪ ಕೇಳಿಬಂದಿತ್ತು. ಮದುವೆ ನಿರಾಕರಿಸಿದ ಯುವಕ ಸುನಿಲ್ ಮಾಡಿದ ಅತ್ಯಾಚಾರ ಮತ್ತು ಅವರ ಕುಟುಂಬದವರು ಮಾಡಿದ ನಿಂದನೆ ಬಗ್ಗೆ ಪತ್ರ ಬರೆದಿದ್ದ ಅಮೃತ. ಆರೋಪಿ ಸುನೀಲ್ ನನ್ನ ಬಂಧಿಸಿರುವ ಬಳ್ಳಾರಿ ಮಹಿಳಾ ಠಾಣೆ ಪೊಲೀಸರು ವಿಚಾರಣೆ ನಡೆಸುತಿದ್ದಾರೆ…