ದಕ್ಷಿಣ ಭಾರತ ಖ್ಯಾತ ನಟ ಜಯಂ ರವಿ ಇತ್ತೀಚೆಗೆ ತಮ್ಮ 15 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಇದೀಗ ಈ ಬಗ್ಗೆ ಜಯಂ ರವಿ ಪತ್ನಿ ತಕರಾರು ಎತ್ತಿದ್ದಾರೆ. ನನ್ನ ಗಮನಕ್ಕೆ ತರದೆ ಪತಿ ಈ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಒಟ್ಟಿಗೆ ಕುಳಿತು ಮಾತನಾಡಲು ಪತಿಯಿಂದ ಅವರು ಸಮಯ ಕೇಳಿದ್ದಾರೆ.
‘ಕಳೆದ ಕೆಲವು ದಿನಗಳಿಂದ ನನ್ನ ಪತಿ ಜೊತೆ ಮಾತನಾಡಲು ಅವಕಾಶ ಕೇಳಿದೆ. ಇಬ್ಬರ ಮಧ್ಯೆ ಮಾತುಕತೆ ಆಗಬಹುದು ಎಂದು ಭಾವಿಸಿದ್ದೇನೆ. ಇದರಿಂದ ನಮ್ಮಿಬ್ಬರ ಮಧ್ಯೆ ಹಾಗೂ ನಮ್ಮ ಕುಟುಂಬದ ಮಧ್ಯೆ ಬೆಳೆದ ಸಂಬಂಧಕ್ಕೆ ಇದು ಗೌರವ ನೀಡುತ್ತದೆ ಎಂದು ಭಾವಿಸುತ್ತೇನೆ’ ಎಂದು ಹೇಳಿದ್ದಾರೆ.
‘ನಾನು ಸಮಯದ ಮೇಲೆ ನಂಬಿಕೆ ಇಟ್ಟಿದ್ದೇನೆ. ನಮ್ಮ ಪರಿಸ್ಥಿತಿ ಅರ್ಥವಾಗುತ್ತದೆ’ ಎಂದು ಅವರು ಬರೆದಿದ್ದಾರೆ. ಮಕ್ಕಳು ಮೊದಲ ಆದ್ಯತೆ ಎಂದು ಅವರು ಹೇಳಿಕೊಂಡಿದ್ದಾರೆ. ವಿಚ್ಛೇದನದಿಂದ ದೂರ ಹೋಗುವ ನಿರ್ಧಾರ ಜಯಂ ರವಿ ಹೇಳಿದ್ದಾರೆ.
ಜಯಂ ರವಿ ಹಾಗೂ ಆರತಿ ಮದುವೆ ಆಗಿ 15 ವರ್ಷಗಳು ಕಳೆದಿವೆ. ಈ ಜೋಡಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ. ಇಷ್ಟು ವರ್ಷಗಳ ಬಳಿಕ ರವಿ ಮತ್ತು ಆರತಿ ಅವರು ಡಿವೋರ್ಸ್ ಪಡೆದಿದ್ದು ಅವರ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.
ಜಯಂ ರವಿ ಅವರು ತಮಿಳಿನಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ. 2003ರಲ್ಲಿ ಅವರು ‘ಜಯಂ’ ಹೆಸರಿನ ಸಿನಿಮಾ ಮಾಡಿದರು. ಆಗ ರವಿ ಆಗಿದ್ದ ಅವರು ಈ ಚಿತ್ರದ ಮೂಲಕ ಜಯಂ ರವಿ ಆದರು. ಅವರು ‘ಪೊನ್ನಿಯಿನ್ ಸೆಲ್ವನ್’ ರೀತಿಯ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಇತ್ತೀಚೆಗೆ ವಿಚ್ಛೇದನದ ಬಗ್ಗೆ ಘೋಷಣೆ ಮಾಡಿದ್ದು ಅವರ ಅಭಿಮಾನಿಗಳಿಗೆ ದೊಡ್ಡ ಮಟ್ಟದಲ್ಲಿ ಶಾಕ್ ನೀಡಿತ್ತು.