ಭಾರತದ ಜನಪ್ರಿಯ ಹಬ್ಬಗಳಲ್ಲಿ ಗಣೇಶ ಚತುರ್ಥಿಯೂ (Ganesh Chaturthi) ಒಂದು. ಸಂಪತ್ತು ಮತ್ತು ಬುದ್ದಿವಂತಿಕೆಯ ದೇವರು ಗಣೇಶನನ್ನು ಸ್ತುತಿಸುವ ಹಬ್ಬ. ದೇಶದೆಲ್ಲೆಡೆ ಗೌರಿ-ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಆರಾಧಿಸಲಾಗುತ್ತದೆ.
ಬೆಂಗಳೂರಿನ ದೊಡ್ಡ ಗಣಪತಿ ದೇಗುಲದಲ್ಲಿ ವಿಘ್ನನಿವಾರಕನಿಗೆ ವಿಶೇಷ ಅಲಂಕಾರ ಮಾಡಿದ್ದು ಬಸವನಗುಡಿಯಲ್ಲಿರುವ ಪ್ರಸಿದ್ದ ದೊಡ್ಡಗಣಪತಿ ದೇವಾಲಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ವಿಶೇಷ ಪೂಜೆ ಪುನಸ್ಕಾರ
200 ರೂ.ಮುಖಬೆಲೆಯ 180 ನೋಟುಗಳನ್ನು ಬಳಸಿ ಗಣೇಶನಿಗೆ ವಿಶೇಷ ಅಲಂಕಾರ ಮಾಡಲಾಗಿದೆ.ನೋಟು, ನಾಣ್ಯಗಳಿಂದ ದೊಡ್ಡ ಗಣಪತಿಗೆ ಸಿಂಗಾರಗೊಂಡಿದ್ದು ಬಣ್ಣ-ಬಣ್ಣ ಹೂಗಳಿಂದ ದೇಗುಲ ಕಂಗೊಳಿಸುತ್ತಿದೆ.
ಬಸವನಗುಡಿಯಲ್ಲಿರುವ 18 ಅಡಿ ಎತ್ತರದ 16 ಅಡಿ ಅಗಲದ ದೊಡ್ಡ ಗಣಪತಿಗೆ 500 ವರ್ಷಗಳ ಇತಿಹಾಸವಿದೆ.ಭಕ್ತರು ಬೆಳಗ್ಗೆಯಿಂದ ದೇಗುಲಕ್ಕೆ ಬಂದು ಕಜ್ಜಾಯ, ಕಡುಬು, ಖರ್ಜಿಕಾಯಿ ಸೇರಿ ವಿವಿಧ ಪ್ರಸಾದ ಅರ್ಪಣೆ ಮಾಡುತ್ತಿದ್ದಾರೆ.