ಸ್ಯಾಂಡಲ್ ವುಡ್ ನಟಿ ದೀಪಿಕಾ ದಾಸ್ ಕಳೆದ ಕೆಲ ತಿಂಗಳ ಹಿಂದೆ ದೀಪಕ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ ಬಳಿಕ ಆಗಾಗ ಪತಿಯೊಂದಿಗೆ ಟ್ರಿಪ್ ಹೋಗುತ್ತಿರುತ್ತಾರೆ. ಅಂತೆಯೇ ಇತ್ತೀಚೆಗೆ ನಟಿ ಪತಿ ಜೊತೆ ಫಾಲ್ಸ್ ಗೆ ತೆರಳಿದ್ದರು. ಈ ವೇಳೆ ರೀಲ್ಸ್ ಮಾಡುವಾಗ ಫಾಲ್ಸ್ನಲ್ಲಿ ಮುಗ್ಗರಿಸಿ ಬಿದ್ದಿದ್ದಾರೆ. ಈ ವಿಡಿಯೋ ಇನ್ಸ್ಟಾಗ್ರಾಂ ಖಾತೆಯಲ್ಲಿ ಸಖತ್ ವೈರಲ್ ಆಗಿದೆ. ಈ ಬೆನ್ನಲ್ಲೇ, ನನಗೇನು ಆಗಿಲ್ಲ ಭಯ ಬೇಡ ಅಂತ ನಟಿ ಪ್ರತಿಕ್ರಿಯಿಸಿದ್ದಾರೆ.
ಇತ್ತೀಚೆಗೆ ಪ್ರವಾಸ ಹೋಗಿದ್ದ ವೇಳೆ, ರೀಲ್ಸ್ ಮಾಡುತ್ತಿದ್ದಾಗ ನಟಿ ಮುಗ್ಗರಿಸಿ ಬಿದ್ದಿದ್ದಾರೆ. ಈ ವಿಡಿಯೋ ಸ್ವತಃ ಅವರೇ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿ ಆತಂಕಕ್ಕೆ ಒಳಗಾಗಿದ್ದ ಫ್ಯಾನ್ಸ್ಗೆ ನಟಿ ಸ್ಪಷ್ಟನೆ ನೀಡಿದ್ದಾರೆ.
ಫಾಲ್ಸ್ನಲ್ಲಿ ಆಕಸ್ಮಿಕವಾಗಿ ಬಿದ್ದಿರೋದು ನಿಜ. ಆದರೆ ಈ ವಿಡಿಯೋ 3 ತಿಂಗಳು ಹಿಂದಿನದ್ದು ಆಗಿದೆ. ಈಗಿನ ಟ್ರೆಂಡ್ ಚೆಕ್ ಮಾಡಲು ಹಳೆಯ ವಿಡಿಯೋವನ್ನು ಪೋಸ್ಟ್ ಮಾಡಿದ್ದೆ. ಫಾಲ್ಸ್ನಲ್ಲಿ ಕಾಲು ಜಾರಿ ಬಿದ್ದಾಗ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದೇನೆ. ಆದರೆ ಈಗ ಚೆನ್ನಾಗಿದ್ದೇನೆ. ಆತಂಕ ಬೇಡ. ಇಷ್ಟೊಂದು ಪ್ರೀತಿ ತೋರಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದ ಎಂದು ದೀಪಿಕಾ ದಾಸ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ನಾಗಿಣಿ ಸೀರಿಯಲ್ ನಲ್ಲಿ ಖ್ಯಾತಿ ಘಳಿಸಿ ಬಳಿಕ ಬಿಗ್ ಬಾಸ್ ಕನ್ನಡ 7 ಶೋಗೆ ಹೋಗಿ ಬಂದಿದ್ದ ದೀಪಿಕಾ ಸದ್ಯ ‘ಚೌಕಟ್ಟು’ ಎಂಬ ಸಿನಿಮಾ ಮೂಲಕ ಮತ್ತೆ ಬೆಳ್ಳಿಪರದೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ.