ಬಾಲಿವುಡ್ ಸ್ಟಾರ್ ದಂಪತಿ ರಣ್ವೀರ್ ಸಿಂಗ್- ದೀಪಿಕಾ ಪಡುಕೋಣೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ದೀಪ್ವೀರ್ ಜೋಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ದೀಪಿಕಾ ರಣವೀರ್ ಜೊತೆ ಮದುವೆಯಾಗಿ ಐದು ವರ್ಷಗಳಾಗಿವೆ. ಮಂಗಳವಾರ, ದಿ ವೀಕ್ನ ವರದಿಯೊಂದು ದೀಪಿಕಾ ಪಡುಕೋಣೆ ಅವರು ತಾಯಿಯಾಗಲು ತಯಾರಿ ನಡೆಸುತ್ತಿದ್ದಾರೆ ಎಂದು ವರದಿ ಮಾಡಿದೆ. ದೀಪಿಕಾಗೆ 2 ತಿಂಗಳಾಗಿದೆ ಎಂದು ಹೇಳಲಾಗ್ತಿದ್ದು ಈ ಬಗ್ಗೆ ದೀಪಿಕಾ ಅಥವಾ ರಣವೀರ್ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ದಿ ವೈಟ್ ಲೋಟಸ್ ಸೀಸನ್ 3 ರಿಂದ ದೀಪಿಕಾ ಹೊರಗುಳಿದಿದ್ದು ಈ ಎಲ್ಲ ಸಂಶಯಕ್ಕೆ ಕಾರಣ. ನಟಿ ಇದರಿಂದ ಹೊರಗುಳಿದಿದ್ದಾರೆ ಎಂದು ವರದಿಯಾದ ಕೆಲವೇ ದಿನಗಳಲ್ಲಿ ಅವರ ಪ್ರೆಗ್ನೆನ್ಸಿ ಕುರಿತು ಹೊಸ ಅಪ್ಡೇಟ್ ವೈರಲ್ ಆಯಿತು. ಕಳೆದ ತಿಂಗಳು, ಹಿಟ್ ಶೋ ಎಚ್ಬಿಒ ಕಾರ್ಯಕ್ರಮದ ಮೂರನೇ ಸೀಸನ್ನಲ್ಲಿ ದೀಪಿಕಾ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ ವಾರಾಂತ್ಯದಲ್ಲಿ ದೀಪಿಕಾ ಕಾರ್ಯಕ್ರಮದಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ.
ನಟಿ ದೀಪಿಕಾ ಕುರಿತು ಪ್ರೆಗ್ನೆನ್ಸಿ ಸುದ್ದಿ, ವದಂತಿ ಬರುತ್ತಿರುವುದು ಇದೇ ಮೊದಲಲ್ಲ. ಕಳೆದ ತಿಂಗಳು, ಫೈಟರ್ನ ಪ್ರಚಾರದ ಫೋಟೋಗಳನ್ನು ದೀಪಿಕಾ ಹಂಚಿಕೊಂಡಾಗ, ಅಭಿಮಾನಿಗಳು ನಟಿಯಲ್ಲಿ ಬೇಬಿ ‘ಬಂಪ್’ ಅನ್ನು ಗಮನಿಸಿದ್ದಾರೆ ಎನ್ನಲಾಗಿತ್ತು. ಶೀಘ್ರದಲ್ಲೇ ಅವರು ಗರ್ಭಿಣಿಯೇ ಎಂದು ಕೇಳಿ ನೆಟ್ಟಿಗರು ಕಮೆಂಟ್ ಮಾಡಿದ್ದರು.
ಈ ವರ್ಷದ ಆರಂಭದಲ್ಲಿ ನಟಿ ಪತಿ ರಣವೀರ್ನೊಂದಿಗೆ ಮಕ್ಕಳನ್ನು ಹೊಂದಲು ಬಯಸುವುದಾಗಿ ದೀಪಿಕಾ ಹೇಳಿದ್ದರು. ವೋಗ್ ಸಿಂಗಾಪುರದೊಂದಿಗೆ ಮಾತನಾಡಿದ್ದ ನಟಿ ರಣವೀರ್ ಮತ್ತು ನಾನು ಮಕ್ಕಳನ್ನು ಇಷ್ಟಪಡುತ್ತೇವೆ. ನಾವು ನಮ್ಮ ಸ್ವಂತ ಕುಟುಂಬವನ್ನು ಪ್ರಾರಂಭಿಸುವ ದಿನಕ್ಕಾಗಿ ನಾವು ಎದುರು ನೋಡುತ್ತಿದ್ದೇವೆ ಎಂದು ಹೇಳಿದ್ದರು.