ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ ಆರೋಪದಲ್ಲಿ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆಗೆ ಬಿಗ್ ರಿಲೀಫ್ ದೊರೆತಿದೆ.
ಚಕ್ರವರ್ತಿ ಸೂಲಿಬೆಲೆ ವಿರುದ್ಧ ದಾಖಲಾಗಿದ್ದ ಎಫ್ಐಆರ್ಗೆ ಮಂಗಳವಾರ ಹೈಕೋರ್ಟ್ (High Court) ತಡೆ ನೀಡಿದೆ. ಹೈಕೋರ್ಟ್ನ ಕಲಬುರಗಿ ವಿಭಾಗೀಯ ಪೀಠವು ಎಫ್ಐಆರ್ಗೆ ತಡೆಯಾಜ್ಞೆ ನೀಡಿದೆ.
ಅಯೋಗ್ಯ’ ಎನ್ನುವ ಹೇಳಿಕೆ ಯಾವ ಜಾತಿಗೂ ಅನ್ವಯವಾಗುದಿಲ್ಲ. ಅಷ್ಟೇ ಅಲ್ಲದೆ, ಯಾರ ಜಾತಿ ನಿಂದನೆ ಆಗಿದೆಯೋ ಅವರು ದೂರು ನೀಡಿಲ್ಲ. ರಾಜಕೀಯ ಪಕ್ಷದ ಜಿಲ್ಲಾಧ್ಯಕ್ಷರು ದೂರು ನೀಡಿದ್ದಾರೆ. ನೀವು ಯಾವ ಉದ್ದೇಶ ಇಟ್ಟುಕೊಂಡು ದೂರು ನೀಡಿದ್ದಿರಿ ಅನ್ನೋದು ಗೋತ್ತಾಗುತ್ತದೆ ಎಂದು ನ್ಯಾಪೀಠ ದೂರುದಾರರನ್ನೇ ತರಾಟೆಗೆ ತೆಗೆದುಕೊಂಡಿದೆ.