ಬೆಂಗಳೂರು : ಯಡಿಯೂರಪ್ಪ ಅವರನ್ನು 2013 ರಲ್ಲಿ ಪಕ್ಷದಿಂದ ಹೊರಗೆ ಕಳಿಸಿದರು. ಆಗ ಪಕ್ಷ ಹೀನಾಯ ಸೋಲು ಕಂಡಿತು ಎಂದು ಬೆಂಗಳೂರಿನಲ್ಲಿ ಮಾಜಿ ಶಾಸಕ ರೇಣುಕಾಚಾರ್ಯ ಹೇಳಿದರು. ಪ್ರಧಾನಿ ಮೋದಿ, ಅಮಿತ್ ಶಾ ಅವರು ಕರೆದು ಯಡಿಯೂರಪ್ಪ ಅವರನ್ನು ರಾಜ್ಯಾಧ್ಯಕ್ಷ ಮಾಡಿದರು. ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯ ಪ್ರವಾಸ ಮಾಡಿದರು ಎಂದರು
ಪ್ರಣಾಳಿಕೆ ಸಮಿತಿ ಅಧ್ಯಕ್ಷರನ್ನ ಯಾರು ಮಾಡಿದ್ದು,, ಹಿರಿಯರನ್ನ ಮಾಡಬೇಕಲ್ವಾ ಪ್ರಯೋಗ ಮಾಡುವ ಅವಶ್ಯಕತೆ ಹಾಗೆ ಇತ್ತ ಅಕ್ಕಿ ಕಡಿಮೆ ಮಾಡಿದ್ರು, ಸಿಲಿಂಡರು ಕಡಿಮೆ ಮಾಡಿದ್ರು, ಒಳಮೀಸಲಾತಿ ಕೊಟ್ಟಿದ್ದು, ಇದೆಲ್ಲ ಸೋಲಿಗೆ ಕಾರಣ ಆಗಿದೆ ಹೀಗಾಗಿ ಈ ಎಲ್ಲ ವಿಚಾರವನ್ನ ಜೆ ಪಿ ನಡ್ಡಾ ಅವರಿಗೆ, ಅಮಿತ್ ಶಾ ಅವರಿಗೆ ಪತ್ರ ಬರೆದು ತಿಳಿಸುತ್ತೇನೆ ಎಂದು ಹೇಳಿದರು.