ಇರಾನ್ ಯಾವುದೇ ಕ್ಷಣದಲ್ಲಿ ಬೇಕಾದರು ಇಸ್ರೇಲ್ ಮೇಲೆ ಪ್ರತೀಕಾರದ ದಾಳಿ ನಡೆಸಬಹುದು ಎಂಬ ಗುಪ್ತಚರ ಮಾಹಿತಿಯ ಹಿನ್ನೆಲೆಯಲ್ಲಿ ಸಬ್ಮೆರಿನ್ ಮತ್ತು ವಿಮಾನವಾಹಕ ಸಮರನೌಕೆಗಳನ್ನು ತಕ್ಷಣ ಮಧ್ಯಪ್ರಾಚ್ಯಕ್ಕೆ ರವಾನಿಸುವಂತೆ ಅಮೆರಿಕ ಆದೇಶಿಸಿದೆ.
ಮಧ್ಯಪ್ರಾಚ್ಯಕ್ಕೆ ಮಾರ್ಗದರ್ಶಿ ಕ್ಷಿಪಣಿ ಸಬ್ ಮೆರಿನ್ ಅನ್ನು ರವಾನಿಸುವಂತೆ ಮತ್ತು ಈಗಾಗಲೇ ಏಶಿಯಾ ಪೆಸಿಫಿಕ್ನಿಂಕದ ಮಧ್ಯಪ್ರಾಚ್ಯದತ್ತ ಹೊರಟಿರುವ ಯುಎಸ್ಎಸ್ ಅಬ್ರಹಾಂ ಲಿಂಕನ್ ವಿಮಾನವಾಹಕ ಸಮರನೌಕೆಗೆ ತ್ವರಿತ ಗತಿಯಲ್ಲಿ ಪ್ರಯಾಣಿಸುವಂತೆ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಆದೇಶಿಸಿದ್ದಾರೆ.
ಅಬ್ರಹಾಂ ಲಿಂಕನ್ ವಿಮಾನವಾಹಕ ನೌಕೆಯಲ್ಲಿ ಎಫ್-35 ಯುದ್ಧವಿಮಾನಗಳು ಹಾಗೂ ಎಫ್ಎಾ-18 ಯುದ್ಧವಿಮಾನಗಳಿವೆ. ಈ ಮಧ್ಯೆ, ಇಸ್ರೇಲ್ ರಕ್ಷಣಾ ಸಚಿವ ಯೊವಾವ್ ಗ್ಯಾಲಂಟ್ ಜತೆ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಮಾತುಕತೆ ನಡೆಸಿದ್ದು, ಇಸ್ರೇಲ್ನಣ ಭದ್ರತೆಗೆ ಸಾಧ್ಯವಿರುವ ಎಲ್ಲಾ ಕ್ರಮಗಳನ್ನೂ ಕೈಗೊಳ್ಳಲು ಅಮೆರಿಕ ಬದ್ಧವಾಗಿದೆ ಎಂದು ಪುನರುಚ್ಚರಿಸಿದ್ದಾರೆ. ಅಲ್ಲದೆ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ವಲಯದಲ್ಲಿ ಅಮೆರಿಕದ ಸೇನಾಪಡೆಯ ಉಪಸ್ಥಿತಿಯನ್ನು ಹೆಚ್ಚಿಸುವ ಅನಿವಾರ್ಯತೆಯ ಬಗ್ಗೆ ಚರ್ಚಿಸಿದ್ದಾರೆ ಎಂದು ಪೆಂಟಗಾನ್ನಿ ಪತ್ರಿಕಾ ಕಾರ್ಯದರ್ಶಿ ಪ್ಯಾಟ್ ರೈಡರ್ ತಿಳಿಸಿದ್ದಾರೆ.