ದೆಹಲಿ:- ಅಗ್ನಿ ಅವಘಡದಿಂದ 11 ಜನರು ಸಾವನ್ನಪ್ಪಿ, 4 ಮಂದಿ ಗಾಯಗೊಂಡ ಘಟನೆ ದೆಹಲಿಯ ಅಲಿಪುರದಲ್ಲಿರುವ ರಾಸಾಯನಿಕ ಗೋದಾಮುಗಳಲ್ಲಿ ಜರುಗಿದೆ.
ಮೃತರನ್ನು ಬಾಬು ಜಗಜೀವನ್ ರಾಮ್ ಆಸ್ಪತ್ರೆಗೆ ಮತ್ತು ನಾಲ್ವರು ಗಾಯಾಳುಗಳನ್ನು ರಾಜಾ ಹರಿಶ್ಚಂದ್ರ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ.
ಫೆಬ್ರವರಿ 15ರಂದು ದೆಹಲಿಯ ಅಲಿಪೋರ್ನಲ್ಲಿರುವ ಪೇಂಟ್ ಫ್ಯಾಕ್ಟರಿಯಲ್ಲಿ ಸಂಭವಿಸಿದ ಭಾರೀ ಬೆಂಕಿ ಕಾಣಿಸಿಕೊಂಡಿತ್ತು. ಈ ಅಪಘಾತದಲ್ಲಿ ಮೃತಪಟ್ಟವರ ಗುರುತು ಇನ್ನೂ ಪತ್ತೆಯಾಗಿಲ್ಲ. ಮೃತರ ದೇಹಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಅವರನ್ನು ಗುರುತಿಸುವುದೂ ಕಷ್ಟವಾಗುತ್ತಿದೆ.
ಭಾರೀ ಬೆಂಕಿಯ ಘಟನೆಯಲ್ಲಿ 11 ಜನರು ಸಾವನ್ನಪ್ಪಿದ ಅಲಿಪುರದ ಬಣ್ಣದ ಕಾರ್ಖಾನೆಯು ಜನನಿಬಿಡ ಪ್ರದೇಶದಲ್ಲಿದೆ. ಘಟನೆ ವೇಳೆ ಕಾರ್ಖಾನೆಯೊಳಗೆ ಕೆಲಸ ನಡೆಯುತ್ತಿದ್ದು, ನೌಕರರು ಕೆಲಸದಲ್ಲಿ ನಿರತರಾಗಿದ್ದರು. ಗುರುವಾರ ಸಂಜೆ ಬೆಂಕಿ ಕಾಣಿಸಿಕೊಂಡಿತ್ತು. ನೌಕರರು ತಪ್ಪಿಸಿಕೊಳ್ಳುವ ಅವಕಾಶವೂ ಇರಲಿಲ್ಲ. ಇದೇ ಕಾರಣಕ್ಕೆ ಕಾರ್ಖಾನೆಯಲ್ಲಿದ್ದವರು ಸುಟ್ಟು ಕರಕಲಾದ ಘಟನೆ ನಡೆದಿದೆ.
ಬೆಂಕಿ ಎಷ್ಟು ಪ್ರಬಲವಾಗಿತ್ತೆಂದರೆ ಕಾರ್ಖಾನೆಯ ಪಕ್ಕದ ಮನೆಗಳ ಮೇಲೆ ಕೂಡ ಪರಿಣಾಮ ಬೀರಿವೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಬೆಂಕಿಗೆ ಕಾರಣವೇನು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ. ಮೃತಪಟ್ಟವರನ್ನು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಶವಾಗಾರಕ್ಕೆ ಕಳುಹಿಸಲಾಗಿದೆ.