ಕೊರೋನಾದ ಬಳಿಕ ಬೆಂಗಳೂರು ಜನರ ನಿದ್ದೆಯನ್ನ ಮಾರಕ ಡೇಂಘೀ ಕಿತ್ತುಕೊಂಡಿದೆ. ದಿನ ಕಳೆದಂತೆ ಡೇಂಘೀ ತನ್ನ ಕಬಂಧ ಬಾಹುಗಳನ್ನ ವಿಸ್ತರಿಸುವ ಕೆಲಸ ಡೆಂಘೀ ಮಾಡ್ತಿದ್ದು, ಇದೀಗ ರಾಜ್ಯದಲ್ಲಿ ಡೆಂಗ್ಯೂ ಕೇಸ್ 7000 ಸಾವಿರದ ಗಡಿ ದಾಟಿದೆ. 352 ಡೆಂಗ್ಯೂ ಕೇಸ್ನಲ್ಲಿ ಇಲ್ಲಿಯವರೆಗೆ 6 ಮಂದಿ ಬಲಿಯಾಗಿದ್ದು, ಕಳೆದ 24 ಗಂಟೆಯಲ್ಲಿ 175 ಮಂದಿಯಲ್ಲಿ ಡೆಂಗ್ಯೂ ಪತ್ತೆಯಾಗಿದೆ.
ಕಳೆದ 24 ಗಂಟೆಯಲ್ಲಿ ಒಂದು ವರ್ಷದೊಳಗಿನ 1 ಮಗುವಿಗೆ ಡೆಂಗ್ಯೂ ಪತ್ತೆಯಾಗಿದ್ದು, ಇಲ್ಲಿಯವರೆಗೂ ಒಂದು ವರ್ಷದೊಳಗಿನ 132 ಮಕ್ಕಳಲ್ಲಿ ಡೆಂಗ್ಯೂ ದೃಢಪಟ್ಟಿದೆ. ಕಳೆದ 24 ಗಂಟೆಯಲ್ಲಿ 1 ವರ್ಷದಿಂದ 18 ವರ್ಷದೊಳಗಿನ 53 ಮಂದಿಯಲ್ಲಿ ಡೆಂಗ್ಯೂ ಕಾಣಿಸಿಕೊಂಡಿದ್ದು,
ಇಲ್ಲಿಯವರೆಗೂ 1 ವರ್ಷದಿಂದ 18 ವರ್ಷದೊಳಗಿನ 2448 ಮಂದಿಯಲ್ಲಿ ಡೆಂಗ್ಯೂ ಪತ್ತೆಯಾಗಿದೆ. ಕಳೆದ 24 ಗಂಟೆಯಲ್ಲಿ 18 ವರ್ಷ ಮೇಲ್ಪಟ್ಟ 121 ಜನರಲ್ಲಿ ಡೆಂಗ್ಯೂ ಪತ್ತೆಯಾಗಿದ್ದು, ಇಲ್ಲಿಯವರೆಗೂ 18ವರ್ಷ ಮೇಲ್ಪಟ್ಟ 4426 ಮಂದಿಗೆ ಡೆಂಗ್ಯೂ ದೃಢಪಟ್ಟಿದೆ.