ಬೆಂಗಳೂರು: ರಾಜ್ಯಾದ್ಯಂತ ಡೆಂಗ್ಯೂ ಹೆಚ್ಚಳ ಆಗುತ್ತಿದ್ದು, ಬೆಂಗಳೂರು ನಗರದ ಸೂಕ್ಷ್ಮ ಪ್ರದೇಶಗಳು ಮಾತ್ರವಲ್ಲದೆ, ಎಲ್ಲಾ ಮನೆಗಳ ಸರ್ವೆ ನಡೆಸಲು ಬಿಬಿಎಂಪಿಗೆ ಸೂಚನೆ ನೀಡಿದ್ದೇನೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಹೆಚ್ಚೆಚ್ಚು ಪ್ರಕರಣಗಳು ಕಂಡು ಬರುವ ಪ್ರದೇಶಗಳಲ್ಲಿ ತುರ್ತುಕಾರ್ಯಗಳನ್ನ ಕೈಗೊಳ್ಳುವಂತೆ ಸೂಚಿಸಲಾಗಿದೆ ಹಾಗೆ ಹಾಗೆ ಇಲ್ಲಿಯವರೆಗೂ ರಾಜ್ಯದಲ್ಲಿ 6187 ಪ್ರಕರಣ ದಾಖಲಾಗಿದೆ ಎಂದರು.
ಈಗಾಗಲೇ ಸಿಎಚ್ಓ ಹಾಗೂ ಡಿಎಚ್ಓಗಳಿಗೆ ಸೂಚಿಸಲಾಗಿದೆ ಆಫೀಸರ್ಸ್ ಹಾಗೂ MHOಗಳು ಈಗಾಗಲೇ ಸೈನ್ಸ್ ಟೀಚರ್ಗಳಿಗೆ ತರಬೇತಿ ನೀಡಿದ್ದಾರೆ MHOಗಳು ಅವರ ವ್ಯಾಪ್ತಿಗೆ ಬರುವ ಶಾಲೆಗಳಿಗೆ ಭೇಟಿ ನೀಡಿ ಟೀಚರ್ ಹಾಗೂ ಮಕ್ಕಳಿಗೆ ಡೆಂಗ್ಯೂ ಬಗ್ಗೆ ಅರಿವು ಮೂಡಿಸಲು ಸೂಚಿಸಲಾಗಿದೆ ಸಾರಿಗೆ ಇಲಾಖೆಯ ಡಿಪೋಗಳಲ್ಲಿಯೂ ಟೈಯರ್ಗಳಲ್ಲಿ ಹೆಚ್ಚಾಗಿ ನೀರು ಸಂಗ್ರಹಣೆ ಆಗುತ್ತೆ ಅವರಿಗೂ ಈಗಾಗಲೇ ಸೂಚನೆ ನೀಡಲಾಗಿದೆ
ಹಾಗೆ ಮಕ್ಕಳ ಹಾಗೂ ಮಹಿಳಾ ಅಭಿವೃದ್ಧಿ ಇಲಾಖೆಗೂ ಸೂಚನೆ ನೀಡಲಾಗಿದ್ದು ಹಳ್ಳಿಗಳಲ್ಲಿರುವ ಮಹಿಳೆಯರಿಗೆ, ಮಕ್ಕಳಿಗೆ ಹಾಗೂ ಅಂಗನವಾಡಿಗಳಲ್ಲಿ ಜಾಗೃತಿ ಮೂಡಿಸಲು ಸೂಚನೆ ಎರಡು ದಿನದ ನಂತರ ಡಿಸಿ ಹಾಗೂ ಸಿಎಚ್ಓಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಅವರ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಯಾವ ರೀತಿ ಕ್ರಮ ಕೈಗೊಳ್ಳಬೇಕೆಂದು ಸೂಚಿಸಲಾಗುವುದು
ಈವರೆಗೆ ಎಷ್ಟು ಕೇಸ್ ಪತ್ತೆ ಗೊತ್ತಾ?
0-1 ವರ್ಷದ ಮಕ್ಕಳ 123 ಕೇಸ್ ಪತ್ತೆ
1-18 ವರ್ಷದವರಲ್ಲಿ 2031 ಕೇಸ್ ಪತ್ತೆ
19-60 ವರ್ಷದಲ್ಲಿ 3313 ಕೇಸ್ ಪತ್ತೆ
61 ವರ್ಷ ಮೇಲ್ಪಟ್ಟವರಲ್ಲಿ 450 ಕೇಸ್ ಪತ್ತೆ