ಬೆಂಗಳೂರು ;- ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದು, ದೇಶದ್ರೋಹ ಅಲ್ಲ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಕಲಬುರ್ಗಿ ವಿಭಾಗೀಯ ಪೀಠದ ಮುಖ್ಯ ನ್ಯಾಯಾಮೂರ್ತಿ ಹೇಮಂತ್ ಚಂದನ್ಗೌಡರ್ ಅವರಿದ್ದ ಏಕಸದಸ್ಯ ಪೀಠವು ಬೀದರ್ನ ಶಾಹೀನ್ ಶಾಲೆಯ ಆಡಳಿತ ಮಂಡಳಿ ಸದಸ್ಯರಾದ ಅಲ್ಲಾವುದ್ದೀನ್, ಅನ್ದುಲ್ ಕಲೇಕ್, ಮೊಹಮ್ಮದ್ ಬಿಲಾಲ್ ಇನಾಮ್ದಾರ್, ಮೊಹಮ್ಮದ್ ಮೆಹ್ತಾಬ್ ವಿರುದ್ಧ ದಾಖಲಾಗಿದ್ದ FIRಅನ್ನು ರದ್ದು ಮಾಡಿದೆ.
ವಾದ-ಪ್ರತಿವಾದವನ್ನು ಸುಧೀರ್ಘವಾಗಿ ಆಲಿಸಿದ ನ್ಯಾಯಾಧೀಶರು ಐಪಿಸಿ ಸೆಕ್ಷನ್ 153(ಎ) ಅಡಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಯಾವುದೇ ಅಂಶಗಳು ಸಹ ಕಂಡು ಬಂದಿಲ್ಲ. ಪ್ರಧಾನಿ ಚಪ್ಪಳಿಯಲ್ಲಿ ಹೊಡೆಯಬೇಕು ಎಂದು ಹೇಳಿರುವುದು ಅವಹೇಳನಕಾರಿಯಲ್ಲ ಬೇಜವಾಬ್ದಾರಿತನದಿಂದ ಕೂಡಿರುವ ಹೇಳಿಕೆ.
ಸರ್ಕಾರ ಹೊಸದಾಗಿ ನೀತಿ ಅಥವಾ ಕಾಯ್ದೆಗಳನ್ನು ಜಾರಿಗೆ ತಂದಾಗ ಟೀಕಿಸುವುದು ಸಹಜ. ಆದರೆ, ಮಕ್ಕಳ ನಾಟಕದ ಮೂಲಕ ಹಿಂಸಾಚಾರ ಹಾಗೂ ಸಮಾಜದ ಸ್ವಾಸ್ಥ್ಯವನ್ನು ಕದಡುವ ಯಾವುದೇ ಆಂಶಗಳು ಕಂಡು ಬಂದಿಲ್ಲ. ಆರೋಪಿತರ ಪೈಕಿ ಒಬ್ಬರು ನಾಟಕದ ತುಣಕನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಆದ್ದರಿಂದ ಆರೋಪಿತರ ಸ್ಥಾನದಲ್ಲಿರುವವರು ಸರ್ಕಾರದ ವಿರುದ್ಧವಾಗಲಿ, ಸಮಾಜದಲ್ಲಿ ಅಶಾಂತಿಯನ್ನುಂಟು ಮಾಡುವ ನಿಟ್ಟಿನಲ್ಲಿ ನಾಟಕ ಮಾಡಿಸಿದ್ದಾರೆ ಎಂದು ಹೇಳಲಾಗದು ಎಂದು ನ್ಯಾಯಪೀಠ ತಿಳಿಸಿದೆ.