ಸಾಕಷ್ಟು ವಿವಾದದ ಮೂಲಕ ತೆರೆಗೆ ಬಂದ ದಿ ಕೇರಳ ಸ್ಟೋರಿ ಸಿನಿಮಾಗೆ ತಮಿಳು ನಾಡು ಹಾಗೂ ಕೇರಳದಲ್ಲಿ ಅಷ್ಟೇನೂ ಸ್ಪಂದನೆ ಸಿಕ್ಕಿಲ್ಲ. ಆದರೆ ಇತರ ರಾಜ್ಯಗಳಲ್ಲಿ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಚಿತ್ರದ ಕುರಿತು ಮೋದಿ ಕೂಡ ಮಾತನಾಡಿದ್ದಾರೆ.
ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಿದ್ದರೂ ಸಿನಿಮಾ ರಿಲೀಸ್ ಆದ ಮೂರೇ ದಿನದಲ್ಲಿ 35.25 ಕೋಟಿ ಗಳಿಸುವ ಮೂಲಕ ಅಚ್ಚರಿ ಮೂಡಿಸಿದೆ. ರಿಲೀಸ್ ದಿನ ಚಿತ್ರಕ್ಕೆ ಅಷ್ಟೇನೂ ರೆಸ್ಪಾನ್ಸ್ ಸಿಕ್ಕಿರಲಿಲ್ಲ. ಆದರೆ, ಶನಿವಾರದಿಂದ ಬಹುತೇಕ ಕಡೆ ಭರ್ಜರಿ ಪ್ರದರ್ಶನ ಕಾಣುತ್ತಿದ್ದು ಚಿತ್ರದ ಕುರಿತು ಸಾಕಷ್ಟು ಮಂದಿ ಮೆಚ್ಚುಗೆಯ ಮಾತನಾಡುತ್ತಿದ್ದಾರೆ.
ದಿ ಕೇರಳ ಸ್ಟೋರಿ ಸಿನಿಮಾದ ಮೊದಲ ದಿನ 8.03 ಕೋಟಿ ರೂ., ಎರಡನೇ ದಿನ 11.22 ಕೋಟಿ ರೂಪಾಯಿ ಮೂರನೇ ದಿನ 16 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಮೂರು ದಿನದ ಒಟ್ಟು ಆದಾಯ 35.25 ಕೋಟಿ ಎಂದು ಬಾಲಿವುಡ್ ಸಿನಿಮಾ ಲೆಕ್ಕಿಗ ತರುಣ್ ಆದರ್ಶ ಟ್ವೀಟ್ ಮಾಡಿದ್ದು ದಿ ಕೇರಳ ಸ್ಟೋರಿ ಸಿನಿಮಾಗಳ ಜೊತೆಗೆ ಇತರ ಬಾಲಿವುಡ್ ಸ್ಟೋರಿಗಳನ್ನು ಕಂಪೇರ್ ಮಾಡಿದ್ದಾರೆ.
ದೇಶದಾದ್ಯಂತ ‘ದಿ ಕೇರಳ ಸ್ಟೋರಿ’ ಸಿನಿಮಾ ರಿಲೀಸ್ ಆಗಿದೆ. ಮಲಯಾಳಂ, ಹಿಂದಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಸಿನಿಮಾ ಮೂಡಿ ಬಂದಿದ್ದು, ಕೇರಳದಲ್ಲೂ ಚಿತ್ರ ಪ್ರದರ್ಶನಕ್ಕೆ ಥಿಯೇಟರ್ ಮಾಲೀಕರು ಹಿಂದೇಟು ಹಾಕಿದ್ದರು. ಕೇರಳ ಸರಕಾರದ ಸಪೋರ್ಟ್ ಇಲ್ಲದ ಕಾರಣದಿಂದಾಗಿ ಮತ್ತು ಪ್ರತಿಭಟನೆಯ ಕಾವು ಜೋರಾಗಿದ್ದರಿಂದ ಚಿತ್ರಮಂದಿರಗಳ ಮಾಲೀಕರು ಭಯದಲ್ಲಿದ್ದಾರಂತೆ. ಈ ಕಾರಣದಿಂದಾಗಿ ಸಾಕಷ್ಟು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗಿಲ್ಲ. ಈ ಮಧ್ಯೆಯೂ ತೆರೆಗೆ ಬಂದ ದಿ ಕೇರಳ ಸ್ಟೋರಿ ಸಿನಿಮಾ ಕಲೆಕ್ಷನ್ ಮೂಲಕ ಕಮಾಲ್ ಮಾಡುತ್ತಿದೆ.