ಬೆಂಗಳೂರು:- ಇತ್ತೀಚಿನ ದಿನಗಳಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿಗೆ ಕುಡಿಯುವ ನೀರಿನ ಅಭಾವ ತಲೆದೂರಿದೆ.
ಇನ್ನೂ ನೀರಿನ ಸಮಸ್ಯೆಯ ನಡುವೆಯೂ ನೀರಿನ ನಿರ್ವಹಣೆಯಲ್ಲಿ ಬೆಂಗಳೂರೇ ಟಾಪ್ ಆಗಿದೆ. ಬಳಸಿದ ನೀರು ನಿರ್ವಹಣೆಯಲ್ಲಿ ಬೆಂಗಳೂರು ರಾಜ್ಯಕ್ಕೆ ನಂ.2. ಥಿಂಕ್ ಟ್ಯಾಂಕ್ ಕೌನ್ಸಿಲ್ ಆನ್ ಎನರ್ಜಿ, ವಾಟರ್ ಆ್ಯಂಡ್ ಎನ್ವಾರ್ನಮೆಂಟ್ ವರದಿಯನ್ವಯ, ದೇಶದ 10 ರಾಜ್ಯಗಳ ಪೈಕಿ 500 ನಗರಗಳಲ್ಲಿ ಬೆಂಗಳೂರಿಗೆ ಟಾಪ್ 2 ಸ್ಥಾನ.
ಬಳಸಿದ ನೀರು ಮರುಬಳಕೆ ವಿಚಾರದಲ್ಲಿ ದೇಶದಲ್ಲೇ ಇದು ಗಮನಾರ್ಹ ಸಾಧನೆ. ಸೂರತ್ ದೇಶದಲ್ಲೇ ಮೊದಲ ಸ್ಥಾನ ಪಡೆದುಕೊಂಡಿದೆ. ಸಂಶೋಧನೆಗಳ ಆಧಾರದಲ್ಲಿ ಬೆಂಗಳೂರು 5 ಅಂಕಗಳ ಪೈಕಿ 3.23 ಅಂಕ ಗಳಿಸಿದೆ. ಸೂರತ್ 3.32 ಅಂಕಗಳ ಮೂಲಕ ಮೊದಲ ಸ್ಥಾನ ಪಡೆದಿದೆ. ಬೇರೆ ಯಾವ ನಗರಗಳೂ ಕನಿಷ್ಠ 3 ಅಂಕಗಳನ್ನು ಗಳಿಸಿಲ್ಲ. ಸಂಸ್ಕರಿಸಿದ ಗೃಹ ತ್ಯಾಜ್ಯವನ್ನು ಮರುಬಳಕೆ ಮಾಡಲು ಸಂಸ್ಕರಿಸಿದ ಬಳಸಿದ ನೀರಿನ ನೀತಿಯನ್ನು ಅಳವಡಿಸಿಕೊಂಡಿರುವ 10 ರಾಜ್ಯಗಳು ಬಳಸಿದ ನೀರಿನ ನಿರ್ವಹಣೆ ಎಂಬ ವಿಷಯಾಧಾರಿತವಾಗಿ ಅಧ್ಯಯನ ನಡೆಸಲಾಗಿತ್ತು
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) 2021 ರಲ್ಲಿ ಪ್ರಕಟಿಸಿದ ಇತ್ತೀಚಿನ ರಾಷ್ಟ್ರೀಯ ಮಟ್ಟದ ಒಳಚರಂಡಿ ದಾಸ್ತಾನು ದತ್ತಾಂಶವನ್ನು ಆಧರಿಸಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಸದ್ಯ ಬೆಂಗಳೂರಿನಲ್ಲಿ ಕುಡಿಯುವ ನೀರಿಗೂ ಹಾಹಾಕಾರವೆದ್ದಿದೆ. ಇಂತಹ ಸಂದರ್ಭದಲ್ಲಿ ಕುಡಿಯಲು ಯೋಗ್ಯವಲ್ಲದ ಉದ್ದೇಶಗಳಿಗೆ ( ತೋಟಗಾರಿಕೆ ಮತ್ತು ಕೈಗಾರಿಕೆಗಳಿಗೆ) ಸಂಸ್ಕರಿಸಿದ ನೀರು ಬಳಸಬಹುದಾಗಿದೆ
ಇತ್ತೀಚೆಗೆ ಬೆಂಗಳೂರು ಜಲಮಂಡಳಿಯೂ ನೀರಿನ ಮರುಬಳಕೆಯನ್ನು ಉಲ್ಲೇಖಿಸಿತ್ತು