2023ರ ಏಕದಿನ ವಿಶ್ವಕಪ್ ಟೂರ್ನಿಯ ಬಹುತೇಕ ಪಂದ್ಯಗಳು ಭಾರತದ ಬ್ಯಾಟಿಂಗ್ ಸ್ನೇಹಿ ಪಿಚ್ ಗಳಲ್ಲಿ ನಡೆಯುತ್ತಿದ್ದು ಈಗಾಗಲೇ ಕೆಲವು ಹೈ- ಸ್ಕೋರಿಂಗ್ ಪಂದ್ಯಗಳಿಗೆ ಸಾಕ್ಷಿಯಾಗಿದೆ. ಅಲ್ಲದೆ ಇಂಗ್ಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾದಂತಹ ಬಲಿಷ್ಠ ತಂಡಗಳ ವಿರುದ್ಧ ಕ್ರಿಕೆಟ್ ಕೂಸುಗಳು ಎನಿಸಿದ ಅಫಘಾನಿಸ್ತಾನ, ನೆದರ್ಲೆಂಡ್ಸ್ ತಂಡಗಳು ಕೂಡ ಐತಿಹಾಸಿಕ ಗೆಲುವು ಸಾಧಿಸಿದೆ.
ಟೂರ್ನಿಯ ಆರಂಭಿಕ ಪಂದ್ಯದಲ್ಲೇ ಡಿಫೆಂಡಿಂಗ್ ಚಾಂಪಿಯನ್ಸ್ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಡೆವೋನ್ ಕಾನ್ವೇ (152* ರನ್) ಹಾಗೂ ರಚಿನ್ ರವೀಂದ್ರ (123* ರನ್) ಭರ್ಜರಿ ಶತಕಗಳ ಸಂಭ್ರಮ ಕಂಡರೆ, ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿಕಾಕ್ (100 ರನ್), ಏಡೆನ್ ಮಾರ್ಕ್ರಮ್ (106 ರನ್) ಹಾಗೂ ರಾಸಿ ವಾನ್ ಡೆರ್ ಡುಸೆನ್ (108 ರನ್) ಶತಕ ಬಾರಿಸಿ ತಂಡ 428 ದಾಖಲೆಯ ಮೊತ್ತ ಗಳಿಸಲು ಸಹಕರಿಸಿ 2023ರ ವಿಶ್ವಕಪ್ ಟೂರ್ನಿಯಲ್ಲಿ ಬ್ಯಾಟರ್ ಗಳು ವಿಜೃಂಭಿಸುವ ಸೂಚನೆ ನೀಡಿದ್ದರು.
1975ರಿಂದ ಆರಂಭಗೊಂಡ ಒಡಿಐ ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸುವ ಬ್ಯಾಟರ್ ಗಳಿಗೆ ಗೋಲ್ಡನ್ ಬ್ಯಾಟ್ ನೀಡಲಾಗುತ್ತದೆ. ಈ ಬಾರಿ ಗೋಲ್ಡನ್ ಬ್ಯಾಟ್ ರೇಸ್ ದಕ್ಷಿಣ ಆಫ್ರಿಕಾದ ಅನುಭವಿ ಓಪನರ್ ಕ್ವಿಂಟನ್ ಡಿಕಾಕ್ 5 ಪಂದ್ಯಗಳಿಂದ 407 ರನ್ ಗಳಿಸಿ ಮುಂಚೂಣಿ ಯಲ್ಲಿದ್ದಾರೆ. ಕ್ವಿಂಟನ್ ಈ ಬಾರಿ ಈಗಾಗಗಲೇ 3 ಶತಕ ಬಾರಿಸಿದ್ದಾರೆ. ಬಾಂಗ್ಲಾದೇಶ ಎದುರು ಮಂಗಳವಾರ (ಅ.24) ನಡೆದ ಪಂದ್ಯದಲ್ಲಿ 140 ಎಸೆತಗಳಲ್ಲಿ 174 ರನ್ ಸಿಡಿಸಿ ಈ ಬಾರಿ ಹೆಚ್ಚು ರನ್ ಗಳಿಸಿದ ಬ್ಯಾಟರ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರು. ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಮತ್ತು ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಅವರನ್ನು ಕ್ವಿಂಟನ್ ಹಿಂದಿಕ್ಕಿದ್ದಾರೆ. ಅಂದಹಾಗೆ ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ 5 ಬ್ಯಾಟರ್ಸ್ ವಿವರ ಇಲ್ಲಿದೆ.
01. ಕ್ವಿಂಟನ್ ಡಿ ಕಾಕ್ (ದಕ್ಷಿಣ ಆಫ್ರಿಕಾ)
2023ರ ಒಡಿಐ ವಿಶ್ವಕಪ್ ಟೂರ್ನಿಗೂ ಮುನ್ನವೇ ಒಡಿಐ ಮಾದರಿಗೆ ವಿದಾಯ ಹೇಳಿರುವ ದಕ್ಷಿಣ ಆಫ್ರಿಕಾದ ಆರಂಭಿಕ ಬ್ಯಾಟರ್ ಕ್ವಿಂಟನ್ ಡಿಕಾಕ್ ಸ್ಫೋಟಕ ಲಯದಲ್ಲಿದ್ದಾರೆ.
02. ವಿರಾಟ್ ಕೊಹ್ಲಿ (ಭಾರತ)
ಆಧುನಿಕ ಕ್ರಿಕೆಟ್ ನ ದಿಗ್ಗಜ ವಿರಾಟ್ ಕೊಹ್ಲಿ, ಟೀಮ್ ಇಂಡಿಯಾದ ಚೇಸಿಂಗ್ ಮಾಸ್ಟರ್ ಆಗಿದ್ದು, ಆಸ್ಟ್ರೇಲಿಯಾ ವಿರುದ್ಧ ನಡೆದ ಟೂರ್ನಿಯ ಮೊದಲ ಪಂದ್ಯದಲ್ಲೇ 85 ರನ್ ಬಾರಿಸಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ್ದರು
03.ರೋಹಿತ್ ಶರ್ಮಾ (ಭಾರತ)
2023ರ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿರುವ ಹಿಟ್ ಮ್ಯಾನ್ ರೋಹಿತ್ ಶರ್ಮಾ, ಅಫಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ 131 ರನ್ ಬಾರಿಸಿ ವಿಶ್ವಕಪ್ ಇತಿಹಾಸದಲ್ಲಿ 7 ಶತಕ ಸಿಡಿಸಿ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆ ಮುರಿದು ಅತಿ ಹೆಚ್ಚು ಶತಕ ಗಳಿಸಿದ ಬ್ಯಾಟರ್ ಎಂಬ ದಾಖಲೆ ಬರೆದಿರುವ ಹಿಟ್ ಮ್ಯಾನ್
04. ಮೊಹಮ್ಮದ್ ರಿಝ್ವಾನ್ (ಪಾಕಿಸ್ತಾನ)
ಪಾಕಿಸ್ತಾನ ತಂಡದ ವಿಕೆಟ್ ಕೀಪರ್, ಬ್ಯಾಟರ್ ಮೊಹಮ್ಮದ್ ರಿಝ್ವಾನ್ 2023ರ ಒಡಿಐ ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ತಂಡದ ಬ್ಯಾಟಿಂಗ್ ಬಲ ತುಂಬುತ್ತಿದ್ದು
05. ರಚಿನ್ ರವೀಂದ್ರ (ನ್ಯೂಜಿಲೆಂಡ್)
ಡಿಫೆಂಡಿಂಗ್ ಚಾಂಪಿಯನ್ಸ್ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವಿಶ್ವಕಪ್ ಟೂರ್ನಿಯ ಚೊಚ್ಚಲ ಶತಕ (123* ರನ್) ಸಿಡಿಸಿ ಭರವಸೆ ಮೂಡಿಸಿದ್ದ ನ್ಯೂಜಿಲೆಂಡ್ ತಂಡದ ಯುವ ತಾರೆ ಹಾಗೂ ಭಾರತೀಯ ಸಂಜಾತ ರಚಿನ್ ರವೀಂದ್ರ