ಹುಬ್ಬಳ್ಳಿ ;- ವಾಣಿಜ್ಯ ನಗರಿಯಲ್ಲಿ ವರುಣನ ಆರ್ಭಟ ಜೋರಾದರು ಕೂಡಾ, ನೀರಿನ ಸಮಸ್ಯೆಗೆ ಕಮ್ಮಿ ಇಲ್ಲಾ. ಕುಡಿಯುವ ನೀರಿನಲ್ಲಿಯೇ ಹುಳುಗಳು ಪತ್ತೆಯಾದ ಘಟನೆ, ನಗರದ ತಿಮ್ಮಸಾಗರ ರೋಡ್ ಅಜ್ಮೀರ್ ನಗರದಲ್ಲಿ ನಡೆದಿದೆ.
ಹೌದು, ಮಳೆಗಾಲ ಆರಂಭವಾದ್ರೆ ಸಾಕು, ರೋಗಗಳ ಹಾವಳಿ ಕೂಡಾ ಪ್ರಾರಂಭವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕುಡಿವ ನೀರಿನಲ್ಲಿ ಹುಳುಗಳು ಪತ್ತೆಯಾಗಿರುವುದು ಇನ್ನಷ್ಟು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. 10 ದಿನಗಳಿಗೆ ಒಂದು ಸಲ ನೀರನ್ನು ಸರಬರಾಜು ಮಾಡಲಾಗುತ್ತದೆ. ಕುಡಿಯುವ ನೀರಿನ ಜೊತೆ ಚರಂಡಿ ನೀರು ಕೂಡಾ ಮಿಶ್ರಣವಾಗಿ ನೀರು ದೊರಕುತ್ತದೆ. ನಳಕ್ಕೆ ಬಟ್ಟೆ ಕಟ್ಟಿ ನೀರನ್ನು ತೆಗೆದುಕೊಂಡರು ಕೂಡಾ ಮತ್ತೆ ಹುಳಗಳು ಪತ್ತೆ ಯಾಗುತ್ತದೆ ಎಂಬುದು ಸ್ಥಳೀಯರ ಗೋಳಾಗಿದೆ. ಈ ಕುಡಿಯುವ ನೀರಿನ ಸಮಸ್ಯೆ ಯಾವಾಗ ಬಗೆಹರಿಯುತ್ತದೆ ಎಂಬುದನ್ನು ಕಾದುನೋಡ ಬೇಕಿದೆ.
ಇದನ್ನೂ ಓದಿ : ಬಿಬಿಎಂಪಿ ವಾರ್ ರೂಮ್, ಕಂಟ್ರೋಲ್ ರೂಂಗೆ ದಿಢೀರ್ ಭೇಟಿ ನೀಡಿದ ಡಿಕೆ ಶಿವಕುಮಾರ್..!