ವಿಜಯಪುರ : ಫೈನಾನ್ಸ್ ಸಾಲಕ್ಕೆ ಹೆದರಿ ರೈತ ಆತ್ಮಹತ್ಯೆಗೆ ಶರಣಾದ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾ. ಸಲಾದಹಳ್ಳಿ ಗ್ರಾಮದಲ್ಲಿ ಘಟನ ನಡೆದಿದೆ. ಬಸನಗೌಡ ಬಿರಾದಾರ್ (38) ತೊಗರಿ ಬೆಳೆಗೆ ಹೊಡೆಯುವ ಔಷಧಿ ಸೇವಿಸಿ ಆತ್ಮಹತ್ಯೆ ಮಾಡಿಕೊಡಿದ್ದಾರೆ.
ಒಟ್ಟು 4.2 ಏಕರೆ ಜಮೀನು ಹೊಂದಿದ್ದ ಬಸನಗೌಡ ಬಿರಾದಾರ್, ಕೆಂಬಾವಿ ಮೈಕ್ರೋ ಫೈನಾನ್ಸ್, ಎಲ್ ಅಂಡ್ ಟಿ, ನವ ಚೈತನ್ಯ,ಇ.ಎಸ್.ಎ.ಎಫ್, ಆರ್.ಬಿ.ಎಲ್, ಸುಗ್ಮಯ್ಯಾ, ಚೈತನ್ಯ, ಧರ್ಮಸ್ಥಳ ಫೈನಾನ್ಸ್ ಗಳಲ್ಲಿ ಒಟ್ಟು 8 ಮೈಕ್ರೋ ಫೈನಾನ್ಸ್ ಗಳಲ್ಲಿ 7.35 ಲಕ್ಷ ಸಾಲ ಮಾಡಿಕೊಂಡಿದ್ದರು.
ಒಂದೊಂದು ಫೈನಾನ್ಸ್ಗಳಲ್ಲಿ ಸಹ 1 ಲಕ್ಷದಿಂದ 1.20 ಲಕ್ಷದ ವರೆಗೂ ಸಾಲ ಪಡೆದಿದ್ದು, ಇನ್ನೂ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ನಲ್ಲಿ 3.5 ಲಕ್ಷ ಸಾಲ ಮಾಡಿಕೊಂಡಿದ್ದರು. ಮನೆಗೆ ಬಂದು ಸಾಲ ಪಾವತಿ ಮಾಡುವಂತೆ ಫೈನಾನ್ಸ್ ಸಿಬ್ಬಂದಿ ಒತ್ತಾಯಿಸಿದ್ದು, ಸಾಲ ತೀರಿಸಲಾಗದೇ ಕಂಗಾಲಾಗಿದ್ದ ಬಸನಗೌಡ ಕಳೆದ ಗುರುವಾರ ರಾತ್ರಿ ವಿಷ ಸೇವಿಸಿದ್ದು, ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಸಾವನ್ನಪ್ಪಿದ್ದಾರೆ.