ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಅತ್ತ ಜೈಲು ಸೇರ್ತಿದ್ದಂಗೆ ಇತ್ತ ಅವರನ್ನ ನಂಬಿಕೊಂಡಿರೋ ನಿರ್ಮಾಪಕರು ಫುಲ್ ಟೆಂನ್ಷನ್ ಆಗಿದ್ದಾರೆ. ಈ ಮಧ್ಯೆ ಬಿಗ್ ಬಾಸ್ ಖ್ಯಾತಿಯ ನಟ ವಿನಯ್ ಗೆ ಅದೊಂದು ಚಿಂತೆ ಕಾಡೋಕೆ ಶುರುವಾಗಿದೆಯಂತೆ.
‘ಬಿಗ್ ಬಾಸ್’ ಮನೆಗೆ ಹೋಗಿ ಬಂದ ಬಳಿಕ ವಿನಯ್ ಗೌಡಗೆ ಸಾಕಷ್ಟು ಸಿನಿಮಾಗಳ ಆಫರ್ ಬರ್ತಿವೆಯಂತೆ. ಅದರಲ್ಲಿ ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಕೂಡ ಒಂದು. ಇದೀಗ ಸಿನಿಮಾ ಕಂಪ್ಲಿಟ್ ಆಗುತ್ತಾ, ಇಲ್ವಾ ಅಂತ ಚಿತ್ರತಂಡ ತಲೆಬಿಸಿ ಮಾಡಿಕೊಂಡಿದೆ. ಇದರ ನಡುವೆ ಡೆವಿಲ್ ಸಿನಿಮಾ ಬಗ್ಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಕುರಿತು ವಿನಯ್ ಗೌಡ ಪ್ರತಿಕ್ರಿಯೆ ನೀಡಿದ್ದಾರೆ.
ಬಿಗ್ ಬಾಸ್ನಿಂದ ಬಂದ್ಮೇಲೆ ‘ಡೆವಿಲ್’ ನಾನು ನಟಿಸಿದ ಪ್ರಾಜೆಕ್ಟ್. ‘ಡೆವಿಲ್’ ಡೈರೆಕ್ಟರ್ ಮಿಲನ ಪ್ರಕಾಶ್ ಅವರ ನಿರ್ಮಾಣದ ಧಾರಾವಾಹಿಗಳಲ್ಲಿ ನಾನು ನಟಿಸಿದ್ದೇನೆ. ನನ್ನ ನಟನೆ ಏನು ಅಂತ ಅವರು ನೋಡಿದ್ದರು. ಹಾಗಾಗಿ ನನ್ನ ಕರೆಸಿ ನೆಗೆಟಿವ್ ಶೇಡ್ ಪಾತ್ರ ಇದೆ, ಒಳ್ಳೆಯ ಸ್ಟಾರ್ ಮುಂದೆ ವಿಲನ್ ಪಾತ್ರ ಅಂತ ಹೇಳಿದರು. ಆ ಮೇಲೆ ನನಗೆ ಅದು ‘ಡೆವಿಲ್’ ಸಿನಿಮಾ ಎಂದು ತಿಳಿಯಿತು. ನನ್ನ ಭಾಗದ 30% ಶೂಟಿಂಗ್ ಆಗಿದೆ. ಇನ್ನೂ ಡೈಲಾಗ್, ದರ್ಶನ್ ಜೊತೆಗಿನ ಒಂದಷ್ಟು ಶೂಟಿಂಗ್ ಬಾಕಿ ಇದೆ ಎಂದು ವಿನಯ್ ಹಂಚಿಕೊಂಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣ ಕಾನೂನು ವ್ಯವಸ್ಥೆಯ ಅಡಿಯಲ್ಲಿ ತನಿಖೆ ನಡೆಯುತ್ತಿದೆ. ಹೀಗಾಗಿ ನಾನು ದರ್ಶನ್ ಅವರ ಬಗ್ಗೆ ಮಾತಾಡೋದು ಸರಿ ಇಲ್ಲ. ಎಲ್ಲವೂ ಖುಷಿ ಖುಷಿಯಾಗಿ ಮುಗಿಯಲಿ ಅಂತ ಬಯಸುವೆ ಎಂದು ವಿನಯ್ ಗೌಡ ಹೇಳಿದ್ದಾರೆ.
ನಾನು ಈ ಪ್ರಾಜೆಕ್ಟ್ ಬಗ್ಗೆ ನೆಗೆಟಿವ್ ಆಗಿ ಯೋಚನೆ ಮಾಡೋದಿಲ್ಲ. ನನಗೆ ‘ಡೆವಿಲ್’ ಸಿನಿಮಾ ಒಳ್ಳೆಯ ಪ್ರಾಜೆಕ್ಟ್ ಆಗಿತ್ತು. ಇದು ಕೈತಪ್ಪಿದರೆ ನಿಜಕ್ಕೂ ಬೇಸರ ಆಗತ್ತೆ, ಅದರಲ್ಲಿ ಸಂದೇಹ ಇಲ್ಲ ಎಂದು ವಿನಯ್ ಹೇಳಿದ್ದಾರೆ.