ಚಾಮರಾಜನಗರ: ಮಹಾಶಿವರಾತ್ರಿ ಪ್ರಯುಕ್ತ ಮಲೆ ಮಹದೇಶ್ವರ ಬೆಟ್ಟದದಲ್ಲಿ 5 ದಿನಗಳ ಕಾಲ ನಡೆಯುವ ಮಹಾ ಶಿವರಾತ್ರಿ ಜಾತ್ರೆಗೆ ರಾಜ್ಯದ ವಿವಿಧೆಡೆಯಿಂದ ಅಪಾರ ಸಂಖ್ಯೆಯ ಭಕ್ತರು ಶಾಗ್ಯ ಬಳಿಯ ಕಾವೇರಿ ನದಿಯನ್ನು ದಾಟಿ ಕಾಲ್ನಡಿಗೆಯ ಮೂಲಕ ಮಲೈಮಹದೇಶ್ವಬೆಟ್ಟಕ್ಕೆ ತೆರಳುತ್ತಿದ್ದಾರೆ.
ಗಡಿ ಜಿಲ್ಲೆ ಚಾಮರಾಜನಗರದ ಹನೂರು ತಾಲೂಕಿನ ಪವಾಡ ಪುರುಸ ಮಲೈಮಹದೇಶ್ವರಬೆಟ್ಟದಲ್ಲಿ ನಡೆಯುವ ಮಹಾ ಶಿವರಾತ್ರಿ ಜಾತ್ರೆಗೆ ಪ್ರತಿ ವರ್ಷ ರಾಮನಗರ, ಕನಕಪುರ, ಚನ್ನಪಟ್ಟಣ, ಬಿಡದಿ, ಬೆಂಗಳೂರು, ಹಾರೋಹಳ್ಳಿ ಹಾಗೂ ಇತರ ಭಾಗಗಳಿಂದ ಲಕ್ಷಾಂತರ ಭಕ್ತರು ಕನಕಪುರದ ಬೊಮ್ಮಸಂದ್ರ ಬಳಿಯ ಕಾವೇರಿ ನದಿಯನ್ನು ದಾಟಿ ಕಾವೇರಿ ವನ್ಯಜೀವಿ ವಲಯದ ಅರಣ್ಯ ಪ್ರದೇಶದ ಮೂಲಕ ಶಾಗ್ಯ ಮಾರ್ಗವಾಗಿ ಕಾಲ್ನಡಿಗೆಯಲ್ಲಿ ಬೆಟ್ಟಕ್ಕೆ ಸಾಗುತ್ತಿದ್ದಾರೆ.