ಸ್ಯಾಂಡಲ್ ವುಡ್ ನಟ ಡಾಲಿ ಧನಂಜಯ್ ಹಾಗೂ ಡಾಕ್ಟರ್ ಧನ್ಯತಾ ಮದುವೆಗೆ ಕೆಲವೇ ಗಂಟೆಗಳು ಮಾತ್ರವೇ ಭಾಕಿ ಇದೆ. ಈಗಾಗಲೇ ಹಲವು ಶಾಸ್ತ್ರಗಳು ನಡೆದಿವೆ, ಇದೀಗ ಮದುವೆ ಮುನ್ನ ಶಾಸ್ತ್ರದ ಕಾರ್ಯಕ್ರಮದಲ್ಲಿ ಧನ್ಯತಾ ಅವರ ಹಣೆಗೆ ಡಾಲಿ ಮುತ್ತನಿಟ್ಟಿದ್ದಾರೆ. ಇದೇ ವೇಳೆ ಧನ್ಯತಾ ಸಹ ಡಾಲಿ ಹಣೆಗೆ ಹೂ ಮುತ್ತು ನೀಡಿದರು.
ಡಾಲಿ ಧನಂಜಯ್ ಮತ್ತು ಧನ್ಯತಾ ಮದುವೆ ಮುನ್ನ ಶಾಸ್ತ್ರಗಳು ಸಂಭ್ರಮದಿಂದ ನಡೆಯುತ್ತಿದೆ. ಇಬ್ಬರು ಕುಟುಂಬಸ್ಥರು ಆಪ್ತರು ಶಾಸ್ತ್ರಗಳಲ್ಲಿ ಭಾಗಿಯಾಗುತ್ತಿದ್ದಾರೆ. ಹಲವು ಶಾಸ್ತ್ರಗಳಲ್ಲಿ ಪರಸ್ಪರ ಗೌರವ, ಪ್ರೀತಿ ವಿಶ್ವಾಸದಿಂದ ಭಾಗಿ ಆಗಿದ್ದಾರೆ.
ಡಾಲಿ ಧನಂಜಯ್ ಕಾಲಿಗೆ ನಮಸ್ಕರಿಸುವ ಮೂಲಕ ಧನ್ಯತಾ ಆಶೀರ್ವಾದ ಪಡೆದರು. ಈ ವೇಳೆ ವಧು-ವರರ ಸಂಬಂಧಿಕರು ಪರಸ್ಪರರ ಬಗ್ಗೆ ತಮಾಷೆ ಮಾಡುತ್ತಾ, ಛೇಡಿಸಿದ್ದು ಚಿತ್ರದಲ್ಲಿ ಕಾಣಬಹುದು.
ಡಾಲಿ ಧನಂಜಯ್, ಧನ್ಯತಾ ಅವರಿಗೆ ಸಿಹಿ ತಿನ್ನಿಸಿದರು. ಕಾಲುಂಗುರ ತೊಡಿಸಿ, ಪರಸ್ಪರ ಹಾರಗಳನ್ನು ಬದಲಾಯಿಸಿಕೊಂಡು ಪರಸ್ಪರರಿಗೆ ಸಿಹಿ ತಿನ್ನಿಸಿದರು.
ನಟ ಡಾಲಿ ಧನಂಜಯ್ ಮತ್ತು ಧನ್ಯತಾ ವಿವಾಹ ಕಾರ್ಯ ಇಂದು ಆರಂಭವಾಗಿದೆ. ಇಂದು ಬಳೆ ಶಾಸ್ತ್ರ, ವಧು ವರ ನಿರೀಕ್ಷಣೆ ಇನ್ನೂ ಹಲವು ಶಾಸ್ತ್ರಗಳು ಇಂದು ನಡೆದಿವೆ.
![Demo](https://prajatvkannada.com/wp-content/uploads/2023/08/new-Aston-Band.jpeg)