ತಮಿಳು ನಟ ಧನುಷ್ ತನ್ನ ಪೋಷಕರಿಗೆ ದುಬಾರಿ ಬೆಲೆಯ ಮನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ಚೆನ್ನೈನ ಪೋಯಿಸ್ ಗಾರ್ಡನ್‌ನಲ್ಲಿ ಹೊಸ ಮನೆ ಕಟ್ಟಿಸಿದ್ದು, ಇದೀಗ ಗೃಹ ಪ್ರವೇಶ ಸಂಭ್ರಮ ನೆರವೇರಿದೆ.
ಧನುಷ್ ಹೊಸ ಮನೆ ಬರೋಬ್ಬರಿ 150 ಕೋಟಿ ರೂಪಾಯಿ ಮೌಲ್ಯದ್ದಾಗಿದ್ದು, ಈ ಮನೆಯನ್ನು ತನ್ನ ಪೋಷಕರಿಗೆ ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ.
ಧನುಷ್ ಹೊಸ ಮನೆಯ ಗೃಹ ಪ್ರವೇಶದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗೃಹ ಪ್ರವೇಶ ಸಂಭ್ರಮದಲ್ಲಿ ಧನುಷ್ ನೀಲಿ ಬಣ್ಣದ ಕುರ್ತಾ ಮತ್ತು ಬಿಳಿ ಪೈಜಾಮ ಧರಿಸಿದ್ದು, ಈ ಸಂಭ್ರಮದಲ್ಲಿ ಧನುಷ್ ಮಕ್ಕಳು ಸಹ ಭಾಗಿಯಾಗಿದ್ದಾರೆ.
ಧನುಷ್ ಮನೆಯ ಗೃಹ ಪ್ರವೇಶಕ್ಕೆ ಸ್ನೇಹಿತರು, ಸಿನಿಮಾರಂಗದ ಗಣ್ಯರು ಮತ್ತು ಆಪ್ತರು ಮಾತ್ರ ಭಾಗಿಯಾಗಿದ್ದರು.
ರಜನಿಕಾಂತ್ ಮಗಳು ಐಶ್ವರ್ಯಾ ಅವರನ್ನು ಮದುವೆಯಾಗಿದ್ದ ನಟ ಧನುಷ್ ಬಾಳಲ್ಲಿ ಬಿರುಕು ಕಾಣಿಸಿಕೊಂಡ ಬಳಿಕ ಇಬ್ಬರೂ ಬೇರೆ ಬೇರೆ ಮನೆಯಲ್ಲಿ ವಾಸಿಸುತ್ತಿದ್ದಾರೆ.