‘ಗೀತಾ’ ಧಾರವಾಹಿಯ ಮೂಲಕ ಖ್ಯಾತಿ ಘಳಿಸಿರುವ ನಟ ಧನುಷ್ ಗೌಡ ಅದ್ಧೂರಿಯಾಗಿ ಹಸೆಮಣೆ ಏರಿದ್ದಾರೆ. ಮದುವೆ ಸಂಭ್ರಮದ ನಡುವೆಯೂ ವೋಟ್ ಮಾಡುವ ಮೂಲಕ ಮಾದರಿಯಾಗಿದ್ದಾರೆ. ಧನುಷ್ ನಡೆಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.
ಏ.26ರಂದು ನಟ ಧನುಷ್ ಅತ್ತೆಯ ಮಗಳ ಜೊತೆ ಸಪ್ತಪದಿ ತುಳಿದಿದ್ದಾರೆ. ಧನುಷ್ ಮದುವೆ ಸಂಭ್ರಮದಲ್ಲಿ ಕಿರುತೆರೆಯ ನಟ-ನಟಿಯರು ಭಾಗವಹಿಸಿ ಶುಭಹಾರೈಸಿದ್ದಾರೆ. ಮದುವೆಯ ಶಾಸ್ತ್ರದ ನಡುವೆ ಧನುಷ್ ವೋಟ್ ಮಾಡಿರೋದು ಅಭಿಮಾನಿಗಳ ಗಮನ ಸೆಳೆದಿದೆ.
ಮಾಂಗಲ್ಯಧಾರಣೆ ವೇಳೆ ವಧು ಸಂಜನಾ ಕಣ್ಣೀರಿಟ್ಟರು. ಈ ವೇಳೆ, ಸಂಗಾತಿಗೆ ಧನುಷ್ ಸಿಹಿಮುತ್ತು ನೀಡಿದ್ದಾರೆ. ಇನ್ನೂ ಗ್ರ್ಯಾಂಡ್ ರಿಸೆಪ್ಷನ್ ಏರ್ಪಡಿಸಿದ್ದು ನಟಿಯರಾದ ಭವ್ಯ ಗೌಡ, ಮೌನ ಗುಡ್ಡೇಮನೆ, ಜಯಶ್ರೀ ಆರಾಧ್ಯ , ಸ್ಪಂದನಾ ಸೋಮಣ್ಣ ಸೇರಿದಂತೆ ಸಾಕಷ್ಟು ಮಂದಿ ಆಗಮಿಸಿ ನವ ಜೋಡಿಗೆ ಶುಭ ಹಾರೈಸಿದರು.