ಭಾರತದ ಸ್ಟಾರ್ ಕ್ರಿಕೆಟಿಗ ಯಜುವೇಂದ್ರ ಚಹಲ್, ನಟಿ ಧನುಶ್ರೀ ದಾಂಪತ್ಯ ಜೀವನ ಕೊನೆಗೂ ಮುರಿದು ಬಿದ್ದಿದೆ. ಹಲವು ದಿನಗಳ ವದಂತಿ ಬಳಿಕ ಇಬ್ಬರು ಬಾಂದ್ರಾ ಫ್ಯಾಮಿಲಿ ಕೋರ್ಟ್ನಲ್ಲಿ ವಿಚ್ಛೇದನ ಪಡೆದಿದ್ದಾರೆ. ಡಿವೋರ್ಸ್ ಬೆನ್ನಲ್ಲೇ ಯಜುವೇಂದ್ರ ಚಹಲ್ಗೆ ಧನುಶ್ರೀ ಜೀವನಾಂಶದ ಬಿಗ್ ಶಾಕ್ ನೀಡಿದ್ದಾರೆ.
ಯಜುವೇಂದ್ರ ಚಹಲ್ ಹಾಗೂ ಧನುಶ್ರೀ ದೂರ ದೂರವಾಗುತ್ತಿರುವ ಸುದ್ದಿ ಸದ್ದು ಮಾಡುತ್ತಿದ್ದಂತೆ ವಿಚ್ಛೇದನದ ಕುರಿತು ಸಾಕಷ್ಟು ಸುದ್ದಿಗಳು ಕೇಳಿ ಬಂದಿತ್ತು. ವಿಚ್ಛೇದನದ ಬಳಿಕ ಧನಶ್ರೀಗೆ ಚಹಲ್ ಅವರು ಬರೋಬ್ಬರಿ 60 ಕೋಟಿ ರೂಪಾಯಿ ಜೀವನಾಂಶ ನೀಡಬೇಕು ಅನ್ನೋ ಬಗ್ಗೆ ವರದಿಯಾಗಿದೆ.
ನಿನ್ನೆಯಷ್ಟೇ ಯಜುವೇಂದ್ರ ಚಹಲ್ ಹಾಗೂ ಧನಶ್ರೀ ವಿಚ್ಛೇದನ ಫ್ಯಾಮಿಲಿ ಕೋರ್ಟ್ನಲ್ಲಿ ಅಧಿಕೃತವಾಗಿದೆ. ಕೆಲವು ಮೂಲಗಳ ಪ್ರಕಾರ ಯಜುವೇಂದ್ರ ಚಹಲ್ ಹಾಗೂ ಧನಶ್ರೀ ಪರಸ್ಪರ ಹೊಂದಾಣಿಕೆಯ ಮೂಲಕ ಅಧಿಕೃತವಾಗಿ ವಿಚ್ಛೇದನ ಪಡೆದುಕೊಂಡಿದ್ದಾರೆ. ಒಪ್ಪಂದದ ಪ್ರಕಾರ ಯಜುವೇಂದ್ರ ಚಹಲ್ ಅವರು 60 ಕೋಟಿ ರೂಪಾಯಿ ಜೀವನಾಂಶ ಕೊಟ್ಟರೆ ಒಪ್ಪಂದ ಅಂತ್ಯಗೊಳ್ಳಲಿದೆ. ಆದರೆ ಹಣಕಾಸಿನ ಒಪ್ಪಂದಗಳ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.
ಯಜುವೇಂದ್ರ ಚಹಲ್ ಹಾಗೂ ಧನಶ್ರೀ ವಿಚ್ಛೇದನ ಅಧಿಕೃತವಾದರೂ 60 ಕೋಟಿ ಜೀವನಾಂಶ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
