ಕನ್ನಡದ ಹೆಸರಾಂತ ನಟ ಧ್ರುವ ಸರ್ಜಾ ಮೂರು ವರ್ಷಗಳ ನಂತರ ತಮ್ಮ ಹುಟ್ಟು ಹಬ್ಬವನ್ನು (Birthday) ಅಭಿಮಾನಿಗಳ ಜೊತೆ ಆಚರಿಸಲು ರೆಡಿಯಾಗಿದ್ದಾರೆ. ಅಕ್ಟೋಬರ್ 6ರಂದು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಧ್ರುವ, ಅಭಿಮಾನಿಗಳಿಗಾಗಿ (Fans) ವಿಶೇಷ ಮನವಿಯೊಂದನ್ನು ಮಾಡಿಕೊಂಡಿದ್ದಾರೆ. ಹುಟ್ಟು ಹಬ್ಬಕ್ಕೆ ಬರುವವರು ಕೇಕ್, ಹಾರ, ತುರಾಯಿಗಳನ್ನು ತರಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ
ಅಕ್ಟೋಬರ್ 5ರಂದು ಧ್ರುವ ಮನೆಯ ಮುಂದೆಯೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಅಂದು ಅಭಿಮಾನಿಗಳು ಶಾಲಾ ಮಕ್ಕಳಿಗೆ ಬೇಕಾಗುವ ಸಾಮಗ್ರಿಗಳನ್ನು ಉಡುಗೊರೆ ರೂಪದಲ್ಲಿ ಕೊಡುವಂತೆ ಕೇಳಿಕೊಂಡಿದ್ದಾರೆ. ಪುಸ್ತಕ, ಬ್ಯಾಗ್, ಪೆನ್ನು ಹೀಗೆ ಅಗತ್ಯ ವಸ್ತುಗಳನ್ನು ಮಾತ್ರ ತನ್ನಿ ಎಂದು ಹೇಳಿಕೊಂಡಿದ್ದಾರೆ
ಹುಟ್ಟು ಹಬ್ಬಕ್ಕೂ ಮುನ್ನ ಅವರು ಮಾರ್ಟಿನ್ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿರಲಿದ್ದಾರೆ. ನಿರ್ದೇಶಕ ಎ.ಪಿ ಅರ್ಜುನ್ ಮತ್ತು ಧ್ರುವ ಸರ್ಜಾ (Dhruva Sarja) ಕಾಂಬಿನೇಷನ್ ನ ‘ಮಾರ್ಟಿನ್’ ಸಿನಿಮಾದ ಶೂಟಿಂಗ್ (Shooting) ಮುಗಿದಿದೆ ಎಂದು ಅಂದಾಜಿಸಲಾಗಿತ್ತು. ಬಿಡುಗಡೆಗೆ ಚಿತ್ರತಂಡ ಸಿದ್ಧವಾಗುತ್ತಿದೆ ಎಂದು ನಂಬಲಾಗಿತ್ತು. ಆದರೆ, ಅಭಿಮಾನಿಗಳ ಅಂದಾಜು ಸುಳ್ಳಾಗಿದೆ. ಚಿತ್ರತಂಡವೇ ಮಾಹಿತಿ ಕೊಟ್ಟಿರುವಂತೆ ಇನ್ನೂ ಮೂರು ಹಾಡುಗಳ ಶೂಟಿಂಗ್ ಬಾಕಿ ಇದೆಯಂತೆ. ಈ ವಾರ ಒಂದು ಹಾಡಿನ ಚಿತ್ರೀಕರಣಕ್ಕೂ ಚಿತ್ರತಂಡ ಸಿದ್ಧವಾಗಿದೆ.