ಜಾವೆಲಿನ್ ಥ್ರೋ ಸ್ಪರ್ಧಿ ನೀರಜ್ ಚೋಪ್ರಾ ಅವರು ಅಮೆರಿಕದ ಯೂಜಿನ್ನಲ್ಲಿ ನಡೆಯುವ ಪ್ರತಿಷ್ಠಿತ ಡೈಮಂಡ್ ಲೀಗ್ ಫೈನಲ್ಸ್ ಕಿರೀಟವನ್ನು ತಮ್ಮಲ್ಲೇ ಉಳಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.
ಜಾವೆಲಿನ್ ಥ್ರೋ ಸ್ಪರ್ಧೆ ಶನಿವಾರ ನಿಗದಿಯಾಗಿದೆ. ಕಳೆದ ವರ್ಷ ಜೂರಿಚ್ನಲ್ಲಿ ನಡೆದಿದ್ದ ಡೈಮಂಡ್ಸ್ ಲೀಗ್ ಫೈನಲ್ಸ್ನಲ್ಲಿ ನೀರಜ್ ಚಾಂಪಿಯನ್ ಆಗಿದ್ದರು.
ಬುಡಾಪೆಸ್ಟ್ನಲ್ಲಿ ಆಗಸ್ಟ್ನಲ್ಲಿ ನಡೆದಿದ್ದ ವಿಶ್ವ ಅಥ್ಲೆಟಿಕ್ ಕೂಟದಲ್ಲಿ ಚಿನ್ನ ಜಯಿಸಿದ್ದ 25 ವರ್ಷದ ನೀರಜ್, ಉತ್ತಮ ಫಾರ್ಮ್ನಲ್ಲಿದ್ದಾರೆ. ಡೈಮಂಡ್ ಲೀಗ್ನ ದೋಹಾ ಮತ್ತು ಲೂಸಾನ್ ಲೆಗ್ನಲ್ಲಿ ಅವರು ಗೆದ್ದಿದ್ದರು.
ನೀರಜ್, ಪ್ರಶಸ್ತಿಯನ್ನು ತಮ್ಮಲ್ಲಿ ಉಳಿಸಿಕೊಳ್ಳುವ ಜತೆಯಲ್ಲೇ ಮೊದಲ ಬಾರಿ 90 ಮೀ. ಸಾಧನೆ ಮಾಡಲು ಪ್ರಯತ್ನಿಸಲಿದ್ದಾರೆ. ಅವರ ವೈಯಕ್ತಿಕ ಶ್ರೇಷ್ಠ ಸಾಧನೆ 89.4 ಮೀ. ಆಗಿದೆ.