ಕನ್ನಡದ ಖ್ಯಾತ ಹಿರಿಯ ನಟಿ ಲೀಲಾವತಿ ಪುತ್ರ ವಿನೋದ್ ರಾಜ್ ಮದುವೆಯ ಸುದ್ದಿ ಸದ್ಯಕ್ಕೆ ಮುಗಿಯುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಸ್ವತಃ ಲೀಲಾವತಿ ಹಾಗೂ ವಿನೋದ್ ರಾಜ್ ಮದುವೆಯಾಗಿರುವುದನ್ನೂ ಒಪ್ಪಿಕೊಂಡರು ನಿರ್ದೇಶಕ ಪ್ರಕಾಶ್ ರಾಜ್ ಮೆಹು ಮಾತ್ರ ಅವರನ್ನು ಪ್ರಶ್ನಿಸುವುದನ್ನು ನಿಲ್ಲಿಸಿಲ್ಲ.
ಈ ಹಿಂದೆ ನಿರ್ದೇಶಕ ಪ್ರಕಾಶ್ ರಾಜ್ ಮೆಹು ತಮ್ಮ ಫೇಸ್ ಬುಕ್ ನಲ್ಲಿ ವಿನೋದ್ ರಾಜ್ ಮದುವೆ ವಿಚಾರವನ್ನು ದಾಖಲೆ ಸಮೇತ ಪ್ರಸ್ತಾಪಿಸಿದ್ದರು. ಜೊತೆಗೆ ನಟಿ ಲೀಲಾವತಿ ಅವರ ಗಂಡನ ಕುರಿತಾಗಿಯೂ ಬರೆದುಕೊಂಡಿದ್ದರು. ಇದಕ್ಕೆ ತಮ್ಮದೇ ಆದ ರೀತಿಯಲ್ಲಿ ಲೀಲಾವತಿ ಪುತ್ರ ವಿನೋದ್ ರಾಜ್ ಪ್ರತಿಕ್ರಿಯಿಸಿದ್ದು, ಪ್ರಕಾಶ್ ರಾಜ್ ಮೆಹು ವಿರುದ್ಧ ಕಿಡಿಕಾರಿದ್ದರು. ಇದೀಗ ಪ್ರಕಾಶ್ ರಾಜ್ ಮೆಹು ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ವಿನೋದ್ ರಾಜ್ ಪತ್ನಿಯ ವಿಚಾರವನ್ನು ಮತ್ತೆ ಪ್ರಸ್ತಾಪ ಮಾಡಿರುವ ಪ್ರಕಾಶ್ ರಾಜ್ ಮೆಹು, ‘ವಿನೋದ್ ರಾಜ್ ತಮ್ಮ ಮನೆಯ ಕೆಲಸದಾಕೆಯನ್ನೇ ಮದುವೆ ಆಗಿದ್ದಾರೆ ಎಂದು ಕೇಳಲ್ಪಟ್ಟಿದ್ದೇನೆ. ಒಂದು ವೇಳೆ ಅದು ನಿಜವೇ ಆಗಿದ್ದರೆ ಹೆಮ್ಮೆಯಿಂದ ಆ ವಿಷಯವನ್ನು ಹೇಳಿಕೊಳ್ಳಬೇಕು. ಆದರೆ, ಯಾಕೆ ಈ ವಿಷಯವನ್ನು ಮುಚ್ಚಿಟ್ಟಿದ್ದಾರೆ ಎಂದು ನನಗೂ ಅಚ್ಚರಿ ಆಗುತ್ತಿದೆ’ ಎಂದಿದ್ದಾರೆ.
ಮಗನ ಮದುವೆಯ ಸುದ್ದಿಗೆ ಪ್ರತಿಕ್ರಿಯಿಸಿದ್ದ ನಟಿ ಲೀಲಾವತಿ, ನನ್ನ ಮಗನಿಗೆ ಸಿಂಪಲ್ ಆಗಿ ಮದುವೆ ಮಾಡಿದ್ದೀನಿ. ಅವನೇನು ಕದ್ದು ಬಸುರಾಗಿರಲಿಲ್ಲ. ನನ್ನ ಹತ್ತಿರ ದುಡ್ಡಿಲ್ಲದ್ದಕ್ಕೆ ತಿರುಪತಿ ಬೆಟ್ಟದ ಮೇಲೆ ಮದುವೆ ಮಾಡಿದೆ. ಎಂಥೆಂದವರ ಮದುವೆ ಎಲ್ಲೆಲ್ಲೋ ಆಗಿದೆ. ಪ್ಯಾಲೇಸ್ ಗಳಲ್ಲಿ ಮಾಡಿದ್ದಾರೆ. ಆದರೆ, ನನಗೆ ಆ ಶಕ್ತಿ ಇರಲಿಲ್ಲ. ಅನೇಕರು ಈ ಕುರಿತು ಹೀಯಾಳಿಸಿದರು. ಹಾಗಾಗಿ ಚರ್ಚೆ ಮಾಡಲಿಲ್ಲ’ ಎಂದಿದ್ದಾರೆ.