ಉದ್ಯಮಿ, ಸ್ಯಾಂಡಲ್ ವುಡ್ ನಿರ್ಮಾಪಕ ಸೌಂದರ್ಯ ಜಗದೀಶ್ ಕಳೆದ ಎರಡು ದಿನಗಳ ಹಿಂದೆ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉದ್ಯಮದಲ್ಲಿ ನಷ್ಟು ಅನುಭವಿಸಿದ್ದರು ಎನ್ನಲಾಗಿದೆ. ದೂರು ಕೊಡುವಾಗ ಕುಟುಂಬಸ್ಥರು ಆತ್ಮಹತ್ಯೆ ವಿಚಾರದಲ್ಲಿ ಗುಟ್ಟುಬಿಟ್ಟುಕೊಟ್ಟಿಲ್ಲ. ಅಲ್ಲದೆ ಜಗದೀಶ್ ಮಾನಸೀಕವಾಗಿ ಬಳಲುತ್ತಿದ್ದರು ಎಂದು ಹೇಳಿದ್ದಾರೆ. ಕಟುಂಬಸ್ಥರ ಹೇಳಿಕೆ ಸಾಕಷ್ಟು ಅನುಮಾನಗಳನ್ನು ಹುಟ್ಟಿಹಾಕಿದೆ. ಹೀಗಾಗಿ ಪೊಲೀಸರು ಎಲ್ಲಾ ಆಯಾಮದಲ್ಲೂ ತನಿಖೆ ಆರಂಭಿಸಿದ್ದಾರೆ.
‘ಸೌಂದರ್ಯ ಕನ್ಸಟ್ರಕ್ಷನ್ಸ್’ ಹೆಸರಿನಲ್ಲಿ ಮೂರು ಜನ ಪಾಲು ದಾರರೊಂದಿಗೆ ಜಗದೀಶ್ ಕಂಪನಿ ಆರಂಭಿಸಿದ್ದರು. ದೊಡ್ಡ ಮಟ್ಟದಲ್ಲಿ ಲೇಔಟ್ ಹಾಗೂ ಅಪಾರ್ಮೆಂಟ್ ಮಾಡಲು ಮುಂದಾಗಿದ್ದರು. ಇದರಲ್ಲಿ ಸೌಂದರ್ಯ ಜಗದೀಶ್ ಸಾಕಷ್ಟು ಹಣ ಹೂಡಿದ್ದರು. ಆದರೆ, ಕೋವಿಡ್ ಬಳಿಕ ಲಾಸ್ ಆಗಿದ್ದರಿಂದ ಮನನೊಂದಿದ್ದರು ಎನ್ನಲಾಗಿದೆ. ಬಿಸ್ನೆಸ್ ಮಾಡ್ತೀನಿ ಎಂದು ಬಂದವರು ಮೋಸ ಮಾಡಿದರೇ ಎನ್ನುವ ಅನುಮಾನ ಶುರುವಾಗಿದೆ.
SBI ಹಾಗೂ IDBI ಬ್ಯಾಂಕ್ನಿಂದ ಸೌಂದರ್ಯ ಜಗದೀಶ್ ಕೊಟ್ಯಾಂತರ ರೂಪಾಯಿ ಸಾಲ ಪಡೆದಿದ್ದರಂತೆ. ಇದೇ ಸಾಲದ ಹಣವನ್ನು ಬಿಸಿನೆಸ್ನಲ್ಲಿ ಹಾಕಿ ಕೈಸುಟ್ಟುಕೊಂಡಿರೋ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಇತ್ತೀಚೆಗೆ SBI ಬ್ಯಾಂಕ್ನವರು ನೊಟೀಸ್ ನೀಡಿ ಅವರಿಗೆ ಸಂಬಂಧಿಸಿದ ಐದು ಪ್ರಾಪರ್ಟಿ ಸೀಜ್ ಮಾಡಲು ಮುಂದಾಗಿದ್ದರು ಎನ್ನಲಾಗಿದೆ. ಜೊತೆಗೆ IDBI ಬ್ಯಾಂಕ್ನಿಂದಲೂ ನಿರಂತರ ನೊಟೀಸ್ಗಳು ಬರೋಕೆ ಆರಂಭವಾಗಿತ್ತು ಎನ್ನಲಾಗಿದೆ. ಹೀಗಾಗಿ ಅವರು ಜೆಟ್ಲಾಗ್ ರೆಸ್ಟೋರೆಂಟ್ ಹಾಗೂ ಪಬ್ ಮಾರಾಟಕ್ಕೂ ಮುಂದಾಗಿದ್ದರೂ ಎನ್ನುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ.
ರೆಸ್ಟೋರೆಂಟ್ ಬಾರ್ ಮಾರುವ ವಿಚಾರದಲ್ಲಿ ಮನೆಯಲ್ಲಿ ಗಲಾಟೆ ನಡೆದಿತ್ತು. ಇದೇ ವಿಚಾರಕ್ಕೆ ಸಾಕಷ್ಟು ಮನನೊಂದಿದ್ದರು. ಗನ್ಮ್ಯಾನ್ ಹಾಗೂ ಅತ್ತೆ ಜೊತೆ ಅವರಿಗೆ ಒಳ್ಳೆಯ ಬಾಂಧವ್ಯ ಇತ್ತು. ಕೆಲ ತಿಂಗಳ ಹಿಂದೆ ಅನಾರೋಗ್ಯದಿಂದ ಗನ್ ಮ್ಯಾನ್ ತೀರಿಕೊಂಡಿದ್ದು,ಅತ್ತೆ ಕೂಡ ಕೆಲ ದಿನಗಳ ಹಿಂದೆ ನಿಧನ ಹೊಂದಿದ್ದರು. ಇದು ಅವರನ್ನು ಬಹುವಾಗಿ ಕಾಡಿತ್ತು. ಇತ್ತೀಚೆಗೆ ಸೌಂದರ್ಯ ಜಗದೀಶ್ ಆರೋಗ್ಯದಲ್ಲೂ ಸಮಸ್ಯೆ ಎದುರಾಗಿತ್ತು. ಇವೆಲ್ಲವೂ ಆತ್ಮಹತ್ಯೆಗೆ ಕಾರಣ ಆಗಿರಬಹುದು ಅನ್ನೋದು ಅನುಮಾನ ಶುರುವಾಗಿದೆ. ಸದ್ಯ ಪೊಲೀಸರು ಎಲ್ಲಾ ಆಯಾಮದಲ್ಲೂ ತನಿಖೆ ಮುಂದುವರೆಸಿದ್ದಾರೆ.