ವಯಾಗ್ರದ ಹೆಸರನ್ನು ನೀವೆಲ್ಲ ಕೇಳಿರ್ತೀರಿ. ಕೆಲವರು ವಯಾಗ್ರ ಬಳಕೆ ಮಾಡ್ತಿರುತ್ತಾರೆ. ವಯಾಗ್ರ ಎಂಬುದು ಟ್ಯಾಬ್ಲೆಟ್ ಹೆಸರು. ಇದನ್ನು ಪ್ರಪಂಚದಾದ್ಯಂತದ ಅನೇಕ ಕಂಪನಿಗಳು ತಯಾರಿಸುತ್ತವೆ. ಜನರು ಇದನ್ನು ಸೆಕ್ಸ್ ಟ್ಯಾಬ್ಲೆಟ್ ಎಂಬ ಕರೆಯುತ್ತಾರೆ. ವಯಾಗ್ರ ನೀಲಿ ಬಣ್ಣದ ಡೈಮಂಡ್ ಆಕಾರದ ಔಷಧ ವಾಗಿದೆ.
ಇದನ್ನು ಆರಂಭದಲ್ಲಿ ಅಧಿಕ ರಕ್ತದೊತ್ತಡ ಮತ್ತು ಆಂಜಿನಾ ಪೆಕ್ಟೋರಿಸ್ ಚಿಕಿತ್ಸೆಗೆ ಬಳಸಲಾಗ್ತಿತ್ತು. ಮಾತ್ರೆ ರಕ್ತದ ಹರಿವನ್ನು ಹೆಚ್ಚಿಸುವ ಮೂಲಕ ಜನನಾಂಗದಲ್ಲಿ ಒತ್ತಡವನ್ನು ಹೆಚ್ಚಿಸುತ್ತದೆ. ವಯಾಗ್ರ ಸಿಲ್ಡೆನಾಫಿಲ್ ಎಂಬ ಔಷಧಿಯನ್ನು ಹೊಂದಿದೆ. ನಾವಿಂದು ವಯಾಗ್ರವನ್ನು ಯಾರು ಸೇವನೆ ಮಾಡಬಾರದು ಹಾಗೆ ಅದನ್ನು ಹೇಗೆ ಮತ್ತು ಯಾವಾಗ ಸೇವನೆ ಮಾಡಬೇಕು ಎಂಬೆಲ್ಲ ಮಾಹಿತಿಯನ್ನು ನಮಗೆ ನೀಡ್ತೆವೆ.
ವಯಾಗ್ರ ಬಳಕೆ ಹೇಗೆ? : ವಯಾಗ್ರವನ್ನು ಊಟಕ್ಕೆ ಅರ್ಧ ಗಂಟೆ ಮೊದಲು ಅಥವಾ 2 ಗಂಟೆಗಳ ನಂತರ ತೆಗೆದುಕೊಳ್ಳುವುದು ಉತ್ತಮ. ಇದನ್ನು ವೈದ್ಯರ ಸಲಹೆಯೊಂದಿಗೆ ಮಾತ್ರ ಬಳಸಬೇಕು. ವಯಾಗ್ರದ ಪರಿಣಾಮ ಸುಮಾರು 4-5 ಗಂಟೆಗಳ ಕಾಲ ಇರುತ್ತದೆ. ವಯಾಗ್ರವನ್ನು ಪುರುಷರು ಮಾತ್ರ ಬಳಸಬೇಕು. ಮಹಿಳೆಯರಿಗೆ ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ ಅಥವಾ ದುರ್ಬಲತೆ ಸಮಸ್ಯೆ ಇಲ್ಲ. ಹಾಗಾಗಿ ಅವರು ಸೇವನೆ ಮಾಡಬಾರದು. ವಯಾಗ್ರವನ್ನು ಸೇವನೆ ಮಾಡುವಾಗ ನೀರನ್ನು ಮಾತ್ರ ಕುಡಿಯಬೇಕು ಎನ್ನುತ್ತಾರೆ ತಜ್ಞರು. ಯಾವುದೇ ಕಾರಣಕ್ಕೂ ದ್ರಾಕ್ಷಾರಸದ ಜೊತೆ ವಯಾಗ್ರ ತೆಗೆದುಕೊಳ್ಳಬೇಡಿ.
ವಯಾಗ್ರವನ್ನು ಯಾರು ಸೇವನೆ ಮಾಡಬಾರದು ? : ಸೆಕ್ಸ್ ಜೀವನದ ಸುಖವನ್ನು ಹೆಚ್ಚಿಸುವ ವಯಾಗ್ರವನ್ನು ಎಲ್ಲರೂ ಸೇವನೆ ಮಾಡುವುದು ಸೂಕ್ತವಲ್ಲ. ಇದ್ರಿಂದ ಕೆಲ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಮೊದಲೇ ಹೇಳಿದಂತೆ ವಯಾಗ್ರದಲ್ಲಿ ಸಿಲ್ಡೆನಾಫಿಲ್ ಇರುತ್ತದೆ. ಸಿಲ್ಡೆನಾಫಿಲ್ ಅಥವಾ ಇತರ ಔಷಧಿಗಳ ಅಲರ್ಜಿ ಹೊಂದಿರುವ ಜನರು ವಯಾಗ್ರ ಸೇವನೆ ಮಾಡಬಾರದು. ಎದೆ ನೋವಿಗೆ ನೈಟ್ರೇಟ್ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ ಅಂಥವರು ಕೂಡ ವಯಾಗ್ರ ತಿನ್ನಬಾರದು. ಹೃದಯ ಮತ್ತು ಯಕೃತ್ತಿನ ಕಾಯಿಲೆ ಇರುವ ಪುರುಷ ರೋಗಿಗಳು ಹಾಗೂ ಪಾರ್ಶ್ವವಾಯು, ಹೃದಯಾಘಾತಕ್ಕೆ ಒಳಗಾದ ಪುರುಷರು ವಯಾಗ್ರದ ಸುದ್ದಿಗೆ ಹೋಗದಿರುವುದು ಒಳ್ಳೆಯದು.
ಕಡಿಮೆ ರಕ್ತದೊತ್ತಡ ಹೊಂದಿರುವ ರೋಗಿಗಳಿಗೆ ಇದು ಒಳ್ಳೆಯದಲ್ಲ. ಅಪರೂಪದ ಆನುವಂಶಿಕ ಕಣ್ಣಿನ ಕಾಯಿಲೆ ಇರುವ ರೋಗಿಗಳು ಮತ್ತು ಲ್ಯುಕೇಮಿಯಾ, ಮಲ್ಟಿಪಲ್ ಮೈಲೋಮಾ ಮುಂತಾದ ರಕ್ತದ ಕ್ಯಾನ್ಸರ್ ಹೊಂದಿರುವ ರೋಗಿಗಳು ವಯಾಗ್ರ ಸೇವನೆ ಮಾಡಬಾರದು. ಹಾಗೆಯೇ ಜನನಾಂಗದ ಅಂಗವಿಕಲತೆ ಹೊಂದಿರುವ ಜನರು ಮತ್ತು ಹೊಟ್ಟೆ ಹುಣ್ಣಿನಿಂದ ಬಳಲುತ್ತಿರುವ ಪುರುಷರು ಕೂಡ ವಯಾಗ್ರ ಸೇವನೆ ಮಾಡುವುದು ಒಳ್ಳೆಯದಲ್ಲ. ರಕ್ತಸ್ರಾವ ಸಮಸ್ಯೆಯಿಂದ ಬಳಲುತ್ತಿರುವ ಪುರುಷರು ಕೂಡ ವಯಾಗ್ರ ಸೇವನೆ ಮಾಡದಿದ್ದರೆ ಒಳಿತು.
ವಯಾಗ್ರ ಸೇವನೆ ಮಾಡಿದ ನಂತ್ರ ಕೆಲ ಪುರುಷರಿಗೆ ತಲೆನೋವು, ವಾಕರಿಕೆ, ಅಜೀರ್ಣ, ಶೀತ, ತಲೆಸುತ್ತು ಕಾಣಿಸಿಕೊಳ್ಳುತ್ತದೆ. ಸಮಸ್ಯೆ ಹೆಚ್ಚಾಗ್ತಿದೆ ಅನ್ನಿಸಿದಾಗ ವೈದ್ಯರನ್ನು ಭೇಟಿಯಾಗುವುದು ಉತ್ತಮ. ವಯಾಗ್ರ ಬಳಕೆಯಿಂದ ಸ್ಮರಣ ಶಕ್ತಿ ಹೆಚ್ಚಾಗುತ್ತದೆ. ಲೈಂಗಿಕ ಕ್ರಿಯೆಯಲ್ಲಿ ತೊಡಗುವುದ್ರಿಂದ ಕೊಬ್ಬು ಕರಗುತ್ತದೆ.