ಬದಲಾದ ಜೀವನಶೈಲಿ ಇತ್ತೀಚೆಗಿನ ನಮ್ಮ ಆಹಾರ ಪದ್ಧತಿ, ಒತ್ತಡ ಇವೆಲ್ಲವೂ ನಮ್ಮ ನಿದ್ರಾಹೀನತೆಗೆ ಕಾರಣವಾಗಿದೆ.
ಸಾಮಾನ್ಯವಾಗಿ ಹೆಚ್ಚಾಗಿ ಫೋನ್ ಬಳಕೆ ಮಾಡುವುದರಿಂದಲೂ ನಮಗೆ ನಿದ್ರಾಹೀನತೆ ಸಮಸ್ಯೆ ಉಂಟಾಗುತ್ತದೆ. ಅಲ್ಲದೇ ಕೆಲವು ಮಾನಸಿಕ ಸಮಸ್ಯೆಗಳು ನಿದ್ರಾಹೀನತೆ ಸಮಸ್ಯೆಗೆ ಕಾರಣವಾಗುತ್ತದೆ. ಅಲ್ಲದೇ ನಿದ್ರೆಗೆ ಕೆಲವು ವಿಟಮಿನ್ ಗಳು ಅಗತ್ತವಾಗಿ ಬೇಕು. ವಿಟಮಿನ್ ಸಿ, ಡಿ, ಕೆ ಮತ್ತು ಬಿ ಇವು ಮೆದುಳು ಸರಿಯಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ.
ಹಾಗಾಗಿ ನೀವು ನಿದ್ರಾಹೀನತೆ ಸಮಸ್ಯೆಯಿಂದ ಮುಕ್ತಿ ಪಡೆಯಲು ವಿಟಮಿನ್ ಸಿ, ಡಿ, ಕೆ ಮತ್ತು ಬಿ ಸಮೃದ್ಧವಾಗಿರುವಂತಹ ಹಾಲು, ಮೊಟ್ಟೆ, ಅಣಬೆ, ಕಿತ್ತಳೆರಸವನ್ನು ಸೇವಿಸಿ. ಇವುಗಳನ್ನು ಪ್ರತಿದಿನ ಸೇವಿಸಿದರೆ ನಿದ್ರಾಹೀನತೆ ಸಮಸ್ಯೆ ಕಾಡುವುದಿಲ್ಲ.