ಟಾಲಿವುಡ್ ಡಾರ್ಲಿಂಗ್ ನಟ ಪ್ರಭಾಸ್ ತಮ್ಮ ಸಿನಿಮಾಗಳ ಜೊತೆಗೆ ಹೆಚ್ಚು ಹೆಚ್ಚು ಸುದ್ದಿಯಾಗೋದು ಮದುವೆ ಮ್ಯಾಟರ್ ನಿಂದ. ಪ್ರಭಾಸ್ ಎಲ್ಲಿಯೇ ಹೋದರು ಮದುವೆ ಯಾವಾಗ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತಲೆ ಇರುತ್ತದೆ. ಆದರೆ ಪ್ರಭಾಸ್ ಯಾಕಿನ್ನೂ ಮದುವೆಯಾಗಿಲ್ಲ ಎಂಬ ಪ್ರಶ್ನೆಗೆ ಉತ್ತರ ಮಾತ್ರ ಸಿಕ್ಕಿಲ್ಲ. ಇದೀಗ ನಿರ್ದೇಶಕ ರಾಜಮೌಳಿ ಪ್ರಭಾಸ್ ಮದುವೆ ಯಾಕಾಗುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ.
44 ವರ್ಷಕ್ಕೆ ಕಾಲಿಟ್ಟಿರುವ ಪ್ರಭಾಸ್ ಮದುವೆಯ ವಿಚಾರ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಹುಟ್ಟುಹಾಕಿತ್ತಿರುತ್ತದೆ. ಡಾರ್ಲಿಂಗ್ ಜೀವನದಲ್ಲಿಯೇ ಮದುವೆಯಾಗುವುದಿಲ್ಲ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದರೆ, ಇನ್ನು ಕೆಲವರು ಮದುವೆ ಆಗುತ್ತಾರೆ ಎನ್ನುತ್ತಿದ್ದಾರೆ. ಆದ್ರೆ, ಪ್ರಭಾಸ್ ಇನ್ನೂ ಯಾಕೆ ಮದುವೆಯಾಗಿಲ್ಲ.. ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಲೇ ಇದೆ. ಇದೀಗ ನಿರ್ದೇಶಕ ರಾಜಮೌಳಿ ಕಾರಣ ತಿಳಿಸಿದ್ದಾರೆ.
ಬಾಹುಬಲಿಗಾಗಿ ಐದು ವರ್ಷಗಳ ಕಾಲ ಪ್ರಭಾಸ್ ಜೊತೆ ಕೆಲಸ ಮಾಡಿದ ಸ್ಟಾರ್ ಡೈರೆಕ್ಟರ್ ರಾಜಮೌಳಿ, ನಟನ ಮದುವೆಯ ಬಗ್ಗೆ ಕೆಲವು ಆಸಕ್ತಿದಾಯಕ ಹೇಳಿಕೆಯನ್ನು ನೀಡಿದ್ದಾರೆ. ಡಾರ್ಲಿಂಗ್ ಯಾಕೆ ಮದುವೆಯಾಗುತ್ತಿಲ್ಲ ಎಂಬುದಕ್ಕೆ ರಾಜಮೌಳಿ ಉತ್ತರಿಸಿದ್ದು ರಾಜಮೌಳಿಯ ಮಾತು ಕೇಳಿ ಫ್ಯಾನ್ಸ್ ಶಾಕ್ ಆಗಿದ್ದಾರೆ.
2020 ರಲ್ಲಿ, ರಾಜಮೌಳಿ, ಪ್ರಭಾಸ್ ಮತ್ತು ರಾಣಾ ದಗ್ಗುಬಾಟಿ ಸೆಲೆಬ್ರಿಟಿ ಟಾಕ್ ಶೋ ಕಾಫಿ ವಿತ್ ಕರಣ್ನಲ್ಲಿ ಭಾಗವಹಿಸಿದ್ದರು. ಅದರ ಭಾಗವಾಗಿ ಮಾತನಾಡಿದ ರಾಜಮೌಳಿ.. ಪ್ರಭಾಸ್ ಮದುವೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಪ್ರಭಾಸ್ ತುಂಬಾ ಸೋಮಾರಿ, ಅವರಿಗೆ ಸೋಮಾರಿ ಹುಡುಗಿಯೇ ಬೇಕು.. ಹುಡುಗಿಯೊಂದಿಗೆ… ಹೆತ್ತವರೊಂದಿಗೆ ಮಾತನಾಡುವುದು… ಅವರಿಗೆ ದೊಡ್ಡ ಟಾಸ್ಕ್, ಅದಕ್ಕೇ ಪ್ರಭಾಸ್ ಮದುವೆಯಾಗಿಲ್ಲ ಎಂದಿದ್ದಾರೆ.
ರಾಜಮೌಳಿ ಮಾತಿಗೆ ಪ್ರತಿಕ್ರಿಯೆ ನೀಡಿದ ಪ್ರಭಾಸ್, ತಾನು ನಿಜವಾಗಿಯೂ ಸೋಮಾರಿ ಮತ್ತು ನಾಚಿಕೆ ಸ್ವಭಾವದವನಾಗಿದ್ದು, ಹೊಸ ಜನರೊಂದಿಗೆ ಮಾತನಾಡಲು ಸಾಧ್ಯವಿಲ್ಲ ಎಂದು ಹಲವು ಸಂದರ್ಶನಗಳಲ್ಲಿ ಹೇಳಿದ್ದಾರೆ. ಆದರೆ ಇದೆಲ್ಲ ನಡೆದು ಹಲವು ವರ್ಷಗಳು ಕಳೆದಿವೆ. ಈಗಲೂ ಪ್ರಭಾಸ್ ಮದುವೆಯಾಗದೆ ಸಿಂಗಲ್ ಆಗಿದ್ದಾರೆ. ಪ್ರಭಾಸ್ ಆದಷ್ಟು ಬೇಗ ಮದುವೆಯಾಗಲಿ ಎಂದು ಫ್ಯಾನ್ಸ್ ಆಸೆ ಪಡ್ತಿದ್ದಾರೆ.