ಬೆಂಗಳೂರು ;– ವಾರ್ಷಿಕ ಮಾವು ಮತ್ತು ಹಲಸು ಮೇಳವನ್ನು ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಆಯೋಜಿಸಲಾಗಿದ್ದು, ನಿರಾಶದಾಯಕ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸಾಮಾನ್ಯವಾಗಿ ಮೇ ತಿಂಗಳಲ್ಲಿ ಮೇಳ ನಡೆಯುತ್ತದೆ. ಆದರೆ ಈ ವರ್ಷ ಮಾವು ಮತ್ತು ಹಲಸು ಮೇಳ ಗ್ರಾಹಕರ ಗಮನ ಸೆಳೆಯುವಲ್ಲಿ ವಿಫಲವಾಗಿದೆ. ಜೂನ್ 2 ರಂದು ಪ್ರಾರಂಭವಾದ ಮೇಳವು ಜೂನ್ 11 ರಂದು ಮುಕ್ತಾಯವಾಗಬೇಕಿತ್ತು. ಆದರೆ ವ್ಯಾಪಾರ ಚೆನ್ನಾಗಿಲ್ಲ ಎಂದು ದೂರಿದ ರೈತರ ಮನವಿಯ ಮೇರೆಗೆ ಜೂನ್ 21 ರವರೆಗೆ ವಿಸ್ತರಿಸಲಾಗಿದೆ.
ಮಾವು ಮಾರಾಟದ ಕೊರತೆಯಿಂದಾಗಿ ಮಾವಿನಹಣ್ಣಿನ ಪೆಟ್ಟಿಗೆಗಳನ್ನು ಎಸೆಯುವ ಪರಿಸ್ಥಿತಿ ಉಂಟಾಗಿದೆ ಎಂದು ಬೇಸರ ಹೊರಹಾಕಿದ್ದಾರೆ.
ಮೇ ತಿಂಗಳಿನಲ್ಲಿ ನಡೆದ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮೇಳ ನಡೆಸಲು ವಿಳಂಬವಾಗಿದೆ. ಫಲಪುಷ್ಪ ಮೇಳದ ಬಗ್ಗೆ ರಾಜ್ಯ ಬೆಂಬಲವೂ ಅಸಮರ್ಪಕವಾಗಿರುವುದು ಆಸಕ್ತಿ ಕಡಿಮೆಯಾಗಲು ಕಾರಣ ಎನ್ನಲಾಗಿದೆ.