ಬೆಂಗಳೂರು:- ಸಿಎಂ ಸಿದ್ದರಾಮಯ್ಯನವರು ಫೆ. 16ರಂದು ಮಂಡಿಸಿದ ಬಜೆಟ್ ಬಗ್ಗೆ ಪೌರ ಕಾರ್ಮಿಕರು ಅಸಮಾಧಾನ ಹೊರ ಹಾಕಿದ್ದಾರೆ.
ಪೌರ ಕಾರ್ಮಿಕರನ್ನ ಖಾಯಂ ಮಾಡುವುದಾಗಿ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ. ಆದರೆ ಪೌರ ಕಾರ್ಮಿಕರನ್ನ ಯಾವ ರೀತಿ ಖಾಯಂ ಮಾಡ್ತಾರೆ. ಎಷ್ಟು ಮಂದಿಯನ್ನ ಖಾಯಂ ಆಗಿ ಮಾಡ್ತಾರೆ. ಈ ಹಿಂದೆ ಸರ್ಕಾರ ಆದೇಶ ಮಾಡಿದೆ ಹೇಳ್ತಿದ್ದಾರೆ
ಹಾಗಾದರೆ ಯಾವ ಸರ್ಕಾರ ಖಾಯಂ ಮಾಡುವುದಾಗಿ ಹೇಳಿದೆ. ಬಿಜೆಪಿ ಸರ್ಕಾರನ,ಕಾಂಗ್ರೆಸ್ ಸರ್ಕಾರನ ನಮಗೆ ಗೊಂದಲ ಇದೆ. ಪೌರ ಕಾರ್ಮಿಕರ ಸಮಸ್ಯೆಯನ್ನ ಸರ್ಕಾರ ಸರಿಯಾಗಿ ಆಲಿಸಬೇಕು ಎಂಬ ಕೂಗು ಕೇಳಿ ಬಂದಿದೆ.