ಮೊದಲ ಪಟ್ಟಿ ಬಿಡುಗಡೆಯ ನಂತರ ಎರಡನೇ ಪಟ್ಟಿಯನ್ನೂ ಕಾಂಗ್ರೆಸ್ ರಿಲೀಸ್ ಮಾಡಿದೆ..ಕಳೆದ ಮೂರು ದಿನಗಳಿಂದ ನಿರಂತರ ಸಭೆ ನಡೆಸಿ ಅಳೆದು ತೂಗಿ ನೋಡಿ ೪೨ ಮಂದಿ ಅಭ್ಯರ್ಥಿಗಳ ಹೆಸರು ಘೋಷಿಸಿದೆ..ಜಾತಿವಾರು ಲೆಕ್ಕಾಚಾರ ಮುಂದಿಟ್ಟುಕೊಂಡೇ ಪಟ್ಟಿ ಅನೌನ್ಸ್ ಮಾಡಿದೆ..ಆದ್ರೆ ಈ ಭಾರಿಯ ಪಟ್ಟಿಗೆ ತೀರ್ವ ಅಸಮಾಧಾನ ಎದುರಾಗಿದೆ..ಆಕಾಂಕ್ಷಿಗಳ ಬೆಂಬಲಿಗರ ಆಕ್ರೋಶ ಮುಗಿಲುಮುಟ್ಟಿದೆ.
ಅಳೆದು ತೂಗಿ ನೋಡಿ ಕಾಂಗ್ರೆಸ್ ಎರಡನೇ ಪಟ್ಟಿಯನ್ನ ಬಿಡುಗಡೆಮಾಡಿದೆ..ಮೊದಲ ಪಟ್ಟಿಯಲ್ಲಿ ೧೨೪ ಅಭ್ಯರ್ಥಿಗಳಘೋಷಣೆ ಮಾಡಿದ್ದ ನಾಯಕರು ಎರಡನೇ ಪಟ್ಟಿಯಲ್ಲಿ ೪೨ ಮಂದಿಗೆ ಮಣೆ ಹಾಕಿದ್ದಾರೆ..೨೨೪ ಕ್ಷೇತ್ರಗಳಲ್ಲಿ ಒಟ್ಟು ೧೬೬ ಕ್ಷೇತ್ರಗಳು ಈಗ ಕ್ಲಿಯರ್ ಆಗಿದೆ..ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಮುಂದುವರಿದಿದೆ..ಮೊದಲ ಪಟ್ಟಿಯನ್ನ ಬಿಡುಗಡೆ ಮಾಡಿದಾಗ ಅಷ್ಟು ಅಸಮಾಧಾನ ಹೊರಬಿದ್ದಿರಲಿಲ್ಲ..ಆದ್ರೆ ಎರಡನೇ ಪಟ್ಟಿ ರಿಲೀಸ್ ಆಗುತ್ತಲೇ ಆಕಾಂಕ್ಷಿಗಳ ಅಸಮಾಧಾನ ಹೊರಬಿದ್ದಿದೆ..
ಮೊದಲ ಪಟ್ಟಿಯಲ್ಲಿ ಆರು ಹಾಲಿ ಶಾಸಕರ ಹೆಸರು ಘೋಷಣೆಯಾಗ್ಲಿಲ್ಲ..ಎರಡನೇ ಪಟ್ಟಿಯಲ್ಲಾದ್ರೂ ಆಗಬಹುದೆಂಬ ನಿರೀಕ್ಷೆಯಲ್ಲಿದ್ರು..ಆದ್ರೆ ಎರಡನೇ ಪಟ್ಟಿಯಲ್ಲಿ ಅಪ್ಜಲಪುರದ ಎಂ.ವೈ .ಪಾಟೀಲರಿಗೆ ಟಿಕೆಟ್ ನೀಡಲಾಗಿದೆ..ನನಗೆ ವಯಸ್ಸಾಗಿದೆ,ಮಗನಿಗೆ ಕೊಡಿ ಅಂದ್ರೂ ಗೆಲ್ತೀರ ಅಂತ ಅವರಿಗೆ ಕೊಡಲಾಗಿದೆ..ಆದ್ರೆ ನಮಗೆ ಟಿಕೆಟ್ ಕೊಡಿ ಅಂತ ಹಿಂದೆ ಬಿದ್ರೂ ಪುಲಿಕೇಶಿನಗರ ಅಖಂಡ ಶ್ರೀನಿವಾಸ್ ಮೂರ್ತಿಗೆ ಟಿಕೆಟ್ ನೀಡಿಲ್ಲ..ಕಳೆದ ೨೦೧೮ ರಲ್ಲಿ ೮೩ ಸಾವಿರ ಮತಗಳ ಅಂತರದಿಂದ ಗೆದ್ರೂ ಟಿಕೆಟ್ ಕೊಡೋಕೆ ಮೀನಾಮೇಷ ಎಣಿಸಲಾಗ್ತಿದೆ..ಇನ್ನು ಹರಿಹರದ ರಾಮಪ್ಪಗೂ ಟಿಕೆಟ್ ಕೊಟ್ಟಿಲ್ಲ.ಶೀಡ್ಲಘಟ್ಟದ ವಿ.ಮುನಿಯಪ್ಪ,ಕುಂದಗೋಳ ಶಾಸಕಿ ಕುಸುಮಾ ಶಿವಳ್ಳಿ,ಲಿಂಗಸುಗೂರಿನ ಡಿ.ಎಸ್.ಹುಲಗೇರಿಗೆ ಟಿಕೆಟ್ ಸಿಕ್ಕಿಲ್ಲ..ಮೂರನೇ ಪಟ್ಟಿಯಲ್ಲಾದ್ರೂ ಕೊಡ್ತಾರಾ ಇಲ್ಲಾ ಕೈ ಎತ್ತುತ್ತಾರಾ ಅನ್ನೋ ಅನುಮಾನಗಳು ಕಾಡ್ತಿವೆ.
ವಿನಯ್ ಕುಲಕರ್ಣಿ ಶಿಗ್ಗಾಂವಿ ಸ್ಪರ್ಧೆಗೆ ಬ್ರೇಕ್..!
ಇನ್ನು ಮಾಜಿ ಸಿಎಂ ಸಿದ್ದರಾಮಯ್ಯನವರ ಕೋಲಾರ ಸ್ಪರ್ಧೆಯ ಬಗ್ಗೆ ಧೃಡವಾಗಿಲ್ಲ..ಎರಡನೇ ಪಟ್ಟಿಯಲ್ಲಿ ಹೆಸರು ಪ್ರಕಟವಾಗಲಿದೆ ಎಂಬ ನಿರೀಕ್ಷೆಯಿತ್ತು..ಆದ್ರೆ ಹೆಸರು ಘೋಷಣೆಯಾಗಿಲ್ಲ..ಎರಡು ಕ್ಷೇತ್ರ ಬೇಡ ಅನ್ನೋ ಸಭೆಯ ಸದಸ್ಯರ ಸಲಹೆಯ ಮೇರೆಗೆ ಏನಾದ್ರೂ ಒಂದೇ ಕ್ಷೇತ್ರದಲ್ಲೇ ನಿಲ್ತಾರಾ ಅನ್ನೋ ಅನುಮಾನಗಳು ಕೇಳಿಬರ್ತಿವೆ..ಮೂರನೇ ಪಟ್ಟಿಯಲ್ಲಿಹೆಸರು ಅನೌನ್ಸ್ ಆಗಲಿದೆ ಎಂಬ ಮಾತುಗಳು ಕೇಳಿ ಬರ್ತಿವೆ..ಇನ್ನು ಸಿಎಂ ಎದುರು ಶಿಗ್ಗಾಂವಿಯಲ್ಲಿ ವಿನಯ್ ಕುಲಕರ್ಣಿ ನಿಲ್ತಾರೆಂಬ ಸುದ್ದಿಯಿತ್ತು..ಆದ್ರೆ ಧಾರವಾಡದಲ್ಲಿ ಟಿಕೆಟ್ ಘೋಷಿಸುವ ಮೂಲಕ ಬ್ರೇಕ್ ಬಿದ್ದಿದೆ..ಇದಕ್ಕೆ ಸಿದ್ದರಾಮಯ್ಯ ಹಾಗೂ ಸಿಎಂ ಬೊಮ್ಮಾಯಿಯವರ ಒಳ ಒಪ್ಪಂದವೂ ಇರಬಹುದೆಂಬ ಮಾತು ಕಾಂಗ್ರೆಸ್ ಪಡಸಾಲೆಯಲ್ಲಿ ಹರಿದಾಡ್ತಿದೆ..
ಟಿಕೆಟ್ ಹಂಚಿಕೆಯಲ್ಲಿ ಸಿದ್ದರಾಮಯ್ಯ ಕೈಮೇಲು..!
ಮೊದಲ ಪಟ್ಟಿಯಲ್ಲಿ ತಮ್ಮವರಿಗೆ ಟಿಕೆಟ್ ಕೊಡಿಸುವಲ್ಲಿ ಡಿಕೆಶಿ ಕೈ ಮೇಲಾಗಿತ್ತು..ಆದ್ರೆ ಎರಡನೇ ಪಟ್ಟಿಯಲ್ಲಿ ಸಿದ್ದರಾಮಯ್ಯ ಹಿಡಿತ ಸಾದಿಸಿದ್ದಾರೆ.ಕಿಮ್ಮನೆ ರತ್ನಾಕರ್,ಆರ್.ಬಿ.ತಿಮ್ಮಾಪೂರ,ಹೆಚ್.ಆಂಜನೇಯ,ಜೆ.ಟಿ.ಪಾಟೀಲ್,ಹೆಚ್.ವೈ.ಮೇಟಿ,ಇಕ್ಬಾಲ್ ಅನ್ಸಾರಿ,ಬಿ.ಆರ್.ಯಾವಗಲ್,ವಿನಯ್ ಕುಲಕರ್ಣಿ,ಸಂತೋಷ್ ಲಾಡ್,ಆನಂದ್ ಗೆ ಟಿಕೆಟ್ ಕೊಡಿಸುವಲ್ಲಿ ಸಿದ್ದು ಕೈ ಮೇಲಾಗಿದೆ..ಇನ್ನು ಅಲ್ಲಮ ಪ್ರಭು ಪಾಟೀಲ್,ವಿಜಯ್ ಸಿಂಗ್,ಚೆನ್ನಾರೆಡ್ಡಿ ಪಾಟೀಲ್,ಎಂ.ವೈ.ಪಾಟೀಲ್,ವಿಠಲ ಕಟಕದೊಂಡ,ಮುಶ್ರಫ್ ಗೆ ಟಿಕೆಟ್ ಕೊಡುವಲ್ಲಿ ಖರ್ಗೆ ಉದಾರತ್ವ ತೋರಿದ್ದಾರೆ..ಬಿ.ಎಲ್.ದೇವರಾಜು,ಮಂಥರ್ ಗೌಡ,ಸಿದ್ದೇಗೌಡ,ರಘುನಾಥ್ ನಾಯ್ಡು,ರವಿಕುಮಾರ್,ಬಿ.ಶಿವರಾಂಗೆ ಟಿಕೆಟ್ ಕೊಡಿಸುವಲ್ಲಿ ಡಿಕೆಶಿ ಯಶಸ್ವಿಯಾಗಿದ್ದಾರೆ..
2ನೇ ಪಟ್ಟಿಯಲ್ಲೂ ಲಿಂಗಾಯತರಿಗೆ ಅಗ್ರಸ್ಥಾನ..!
ಎರಡನೇ ಪಟ್ಟಿಯನ್ನ ಜಾತಿವಾರು ಲೆಕ್ಕಾಚಾರದ ಮೇಲೆಯೇ ಆಯ್ಕೆ ಮಾಡಲಾಗಿದೆ..ಮೊದಲ ಪಟ್ಟಿಯಂತೆ ಎರಡನೇ ಪಟ್ಟಿಯಲ್ಲೂ ಲಿಂಗಾಯತ ಸಮುದಾಯಕ್ಕೆ ಹೆಚ್ಚಿನ ಟಿಕೆಟ್ ನೀಡಲಾಗಿದೆ..ಲಿಂಗಾಯತರಿಗೆ೧೦,ಕುರುಬರಿಗೆ ೩,ಒಕ್ಕಲಿಗರಿಗೆ ೧೦,ಮುಸ್ಲಿಂ ಸಮುದಾಯಕ್ಕೆ ೩,ಒಬಿಸಿಗೆ ೧,ಮೊಗವೀರಗೆ ೨, ರೆಡ್ಡಿ೧,ರಜಪೂತ೧,ಎಸ್ಸಿ,ಎಸ್ಟಿಗೆ ೬,ಈಡಿಗ ಸಮುದಾಯಕ್ಕೆ ೧ ಟಿಕೆಟ್ ಹಂಚಿಕೆ ಮಾಡಲಾಗಿದೆ.
ಒಟ್ನಲ್ಲಿ ಕಾಂಗ್ರೆಸ್ ಎರಡನೇ ಪಟ್ಟಿಯೂ ಬಿಡುಗಡೆಯಾಗಿದೆ..ಮೂರನೇ ಪಟ್ಟಿ ಬಿಡುಗಡೆಗೆ ಸಭೆ ಮುಂದುವರೆದಿದೆ..ನಾಳೆಯೊಳಗೆ ಮೂರನೇ ಪಟ್ಟಿ ರಿಲೀಸ್ ಆಗುವ ಸಾಧ್ಯತೆಯಿದೆ..ಆದ್ರೆ ಮೊದಲ ಪಟ್ಟಿಗಿಂತ ಎರಡನೇ ಪಟ್ಟಿಯಲ್ಲಿ ಸ್ವಲ್ಪ ಎಡವಿದಂತಿದೆ..ಆಕಾಂಕ್ಷಿಗಳ ಅಸಮಾಧಾನವೂ ಹೆಚ್ಚಾಗಿದೆ