ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ, ಖಾತೆ ಹಂಚಿಕೆ, ಗ್ಯಾರಂಟಿಗಳ ಜಾರಿ ಸವಾಲು ಮುಗಿದ ಬೆನ್ನಲ್ಲೇ, ಸಿಎಂ ಸಿದ್ದರಾಮಯ್ಯ ಅವರು ಜಿಲ್ಲಾಉಸ್ತುವಾರಿ ಹಂಚಿಕೆ ಕಸರತ್ತು ಕೈಗೆತ್ತಿಕೊಂಡಿದ್ದಾರೆ. ಇಂದು ಸಚಿವರಿಗೆ ಉಸ್ತುವಾರಿ ಹಂಚಿಕೆ ಸಂಬಂಧ ಅಧಿಕೃತ ಪಟ್ಟಿ ಹೊರಬೀಳುವ ನಿರೀಕ್ಷೆಯಿದೆ.
ಸಂಪುಟದಲ್ಲಿ9 ಜಿಲ್ಲೆಗಳಿಗೆ ಪ್ರಾತಿನಿಧ್ಯವಿಲ್ಲ. ಆದರೆ, ಬೆಳಗಾವಿ, ಬೆಂಗಳೂರು, ಮೈಸೂರು, ತುಮಕೂರು, ವಿಜಯಪುರ, ಕಲಬುರಗಿ, ಬೀದರ್ ಜಿಲ್ಲೆಗಳನ್ನು ಹೆಚ್ಚು ಸಚಿವರು ಪ್ರತಿನಿಧಿಸುತ್ತಿದ್ದು, ಎಲ್ಲರೂ ಸ್ವಂತ ಜಿಲ್ಲೆಯ ಉಸ್ತುವಾರಿ ಬಯಸಿದ್ದಾರೆ. ಹಾಗಾಗಿ, ಈ ಪಟ್ಟಿ ಅಂತಿಮಗೊಳಿಸುವುದೂ ಸಿಎಂಗೆ ಸ್ವಲ್ಪಮಟ್ಟಿಗೆ ಇಕ್ಕಟ್ಟಿನ ಸಂದರ್ಭ ಸೃಷ್ಟಿಸಿದೆ.
ಯಾವ ಯಾವ ಜಿಲ್ಲೆಗೆ ಯಾರು ಪಟ್ಟು?
ತುಮಕೂರು ಜಿಲ್ಲೆಉಸ್ತುವಾರಿಗೆ ಡಾ.ಜಿ. ಪರಮೇಶ್ವರ್ ಮತ್ತು ರಾಜಣ್ಣ ಇಬ್ಬರೂ ಪಟ್ಟು ಹಿಡಿದಿದ್ದರೆ, ಬೆಳಗಾವಿ ಜಿಲ್ಲೆ ಮೇಲೆ ಹಿಡಿತ ಬಿಟ್ಟುಕೊಡಲು ಸತೀಶ್ ಜಾರಕಿಹೊಳಿ ಒಪ್ಪುವ ಸಾಧ್ಯತೆ ಇಲ್ಲ. ಬೆಂಗಳೂರು ನಗರದ ಉಸ್ತುವಾರಿಯನ್ನು ರಾಮಲಿಂಗಾರೆಡ್ಡಿ, ಕೆ.ಜೆ. ಜಾಜ್ರ್, ಕೃಷ್ಣ ಬೈರೇಗೌಡ ಮತ್ತು ದಿನೇಶ್ ಗುಂಡೂರಾವ್ ನಾಲ್ವರೂ ಬಯಸಿದ್ದಾರೆ. ವಿಜಯಪುರ ಉಸ್ತುವಾರಿಗಾಗಿ ಎಂ.ಬಿ. ಪಾಟೀಲ್ ಮತ್ತು ಶಿವಾನಂದ ಪಾಟೀಲ್ ಪ್ರಯತ್ನ ನಡೆಸಿದ್ದಾರೆ.
ಕರಡು ಪಟ್ಟಿ ಸಿದ್ಧ
ಸಚಿವರ ನಿರೀಕ್ಷೆ ಹಾಗೂ ಒತ್ತಡದ ನಡುವೆಯೂ ಸಿಎಂ ಸಿದ್ದರಾಮಯ್ಯ ಅವರು ಉಸ್ತುವಾರಿ ಸಚಿವರ ಕರಡು ಪಟ್ಟಿ ಸಿದ್ದಪಡಿಸಿದ್ದಾರೆ. ಸಣ್ಣ ಪುಟ್ಟ ಬದಲಾವಣೆಯೊಂದಿಗೆ ಈ ಪಟ್ಟಿ ಫೈನಲ್ ಆಗಬಹುದು ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.
ಸಂಭಾವ್ಯ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ
- ಬೆಂಗಳೂರು ನಗರ- ಕೆ.ಜೆ. ಜಾರ್ಜ್
- ಬೆಂಗಳೂರು ಗ್ರಾಮಾಂತರ- ರಾಮಲಿಂಗಾ ರೆಡ್ಡಿ
- ಕೋಲಾರ- ಕೆ.ಎಚ್. ಮುನಿಯಪ್ಪ
- ಚಿಕ್ಕಬಳ್ಳಾಪುರ – ಡಾ ಎಂ.ಸಿ. ಸುಧಾಕರ್
- ರಾಮನಗರ- ಡಿ.ಕೆ. ಶಿವಕುಮಾರ್
- ಮಂಡ್ಯ- ಎನ್. ಚಲುವರಾಯಸ್ವಾಮಿ
- ಮೈಸೂರು- ಡಾ.ಎಚ್.ಸಿ. ಮಹದೇವಪ್ಪ
- ಚಾಮರಾಜನಗರ- ದಿನೇಶ್ ಗುಂಡೂರಾವ್
- ಕೊಡಗು- ಕೆ. ವೆಂಕಟೇಶ್
- ದಕ್ಷಿಣ ಕನ್ನಡ- ಕೃಷ್ಣ ಬೈರೇಗೌಡ
- ಉಡುಪಿ- ಡಾ.ಜಿ. ಪರಮೇಶ್ವರ
- ಉತ್ತರ ಕನ್ನಡ- ಮಂಕಾಳ್ ವೈದ್ಯ
- ತುಮಕೂರು- ಕೆ.ಎನ್. ರಾಜಣ್ಣ
- ಚಿತ್ರದುರ್ಗ- ಡಿ.ಸುಧಾಕರ್
- ಶಿವಮೊಗ್ಗ- ಮಧು ಬಂಗಾರಪ್ಪ
- ಹಾಸನ- ಈಶ್ವರ್ ಖಂಡ್ರೆ
- ಚಿಕ್ಕಮಗಳೂರು- ಪ್ರಿಯಾಂಕ್ ಖರ್ಗೆ
- ದಾವಣಗೆರೆ- ಎಸ್.ಎಸ್. ಮಲ್ಲಿಕಾರ್ಜುನ
- ಧಾರವಾಡ- ಸಂತೋಷ್ ಲಾಡ್
- ಬೆಳಗಾವಿ – ಸತೀಶ್ ಜಾರಕಿಹೊಳಿ
- ಬೀದರ್- ರಹೀಂ ಖಾನ್
- ಕಲಬುರಗಿ – ಡಾ.ಶರಣ ಪ್ರಕಾಶ್ ಪಾಟೀಲ್
- ವಿಜಯಪುರ- ಎಂ.ಬಿ. ಪಾಟೀಲ್
- ಬಳ್ಳಾರಿ- ಬಿ. ನಾಗೇಂದ್ರ
- ಗದಗ- ಎಚ್.ಕೆ. ಪಾಟೀಲ್
- ಹಾವೇರಿ- ಜಮೀರ್ ಅಹ್ಮದ್ ಖಾನ್
- ಕೊಪ್ಪಳ- ಶಿವರಾಜ್ ತಂಗಡಗಿ
- ಯಾದಗಿರಿ- ಶರಣ ಬಸಪ್ಪ ದರ್ಶನಾಪುರ
- ಬಾಗಲಕೋಟೆ- ಶಿವಾನಂದ ಪಾಟೀಲ್
- ವಿಜಯನಗರ- ಲಕ್ಷ್ಮೇ ಹೆಬ್ಬಾಳಕರ್
- ರಾಯಚೂರು- ಎನ್.ಎಸ್. ಬೋಸರಾಜು