ಅಪ್ಪು ನಟನೆಯ ಜಾಕಿ ಸಿನಿಮಾದ ಮೂಲಕ ಕನ್ನಡಿಗರಿಗೂ ಚಿರಪರಿಚಿತರಾದ ಮಲಯಾಳಂ ನಟಿ ಭಾವನಾ ಪತಿಯಿಂದ ವಿಚ್ಛೇದನ ಪಡೆದು ಒಂಟಿ ಜೀವನ ನಡೆಸುತ್ತಿದ್ದಾರೆ ಎಂಬ ವದಂತಿಗಳು ಕೇಳಿ ಬರುತ್ತಿದೆ. ಈ ಬಗ್ಗೆ ಕೊನೆಗೂ ಭಾವನಾ ಪ್ರತಿಕ್ರಿಯೆ ನೀಡಿದ್ದಾರೆ.
ತಮಿಳು, ಮಲಯಾಳಂ ಮತ್ತು ಕನ್ನಡ ಚಿತ್ರರಂಗದ ಖ್ಯಾತ ನಟಿ ಭಾವನಾ ಮೆನನ್ ತಮಿಳಿನಲ್ಲಿ ವೇಲ್, ಚಿತ್ರಂ ಬೆಸುತಡಿ, ದೀಪಾವಳಿ, ಜಯಂ ಕೊಂಡನ್, ಆರ್ಯ, ಅಸಲ್ ಮುಂತಾದ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಜಾಕಿ, ರೋಮಿಯೋ, ಮೈತ್ರಿ, ಉತ್ತರಕಾಂಡ ಸೇರಿದಂತೆ ಇನ್ನೂ ಸಾಕಷ್ಟು ಸಿನಿಮಾಗಳಲ್ಲಿ ಭಾವನ ಮೆನನ್ ಬಣ್ಣ ಹಚ್ಚಿದ್ದಾರೆ.
ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ನಟಿ ಭಾವನಾ ಮಲಯಾಳಂನಲ್ಲೂ ಹಲವು ಚಿತ್ರಗಳಲ್ಲಿ ನಟಿಸಿದ ಸೈ ಎನಿಸಿಕೊಂಡಿದ್ದಾರೆ. ಕನ್ನಡದಲ್ಲಿ ಅಪ್ಪು ಅಭಿನಯದ ಜಾಕಿ ಸಿನಿಮಾದಲ್ಲಿ ನಟಿಸಿ ಕನ್ನಡಿಗರ ಮನಸ್ಸನ್ನು ಗೆದ್ದಿದ್ದಾರೆ.
2018 ರಿಂದ ಸಿನಿಮಾ ರಂಗದಿಂದ ದೂರವಿದ್ದ ಭಾವನ 2023 ರಲ್ಲಿ ಮತ್ತೆ ಕಂಬ್ಯಾಕ್ ಮಾಡಿದರು. ಅವರ ಅಭಿನಯದ ಪಾತ್ರದಲ್ಲಿ ಮಲಯಾಳಂ ಚಿತ್ರ ಹಂಟ್ ಬಿಡುಗಡೆಯಾಗಿರುವುದು ಗಮನಾರ್ಹ. ಅವರು ಮದುವೆಗೆ ಮೊದಲೂ ಕೂಡಾ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.
2018ರಲ್ಲಿ ನವೀನ್ ಎಂಬ ಉದ್ಯಮಿಯನ್ನು ಮದುವೆಯಾಗಿದ್ದ ಭಾವನಾ ಸದ್ಯ ಮದುವೆಯ ನಂತರವೂ ಬೇಡಿಕೆಯ ನಟಿಯಾಗಿದ್ದಾರೆ. ಭಾವನಾ ಪತಿಯಿಂದ ವಿಚ್ಛೇದನ ಪಡೆದು ಒಂಟಿ ಜೀವನ ನಡೆಸುತ್ತಿದ್ದಾರೆ ಎಂಬ ವದಂತಿ ಕೆಲ ದಿನಗಳಿಂದ ಹರಿದಾಡುತ್ತಿದೆ.
ಈ ವಿಚಾರವಾಗಿ ಭಾವನಾ ಕಡೆಯಿಂದ ಈವರೆಗೆ ಯಾವುದೇ ವಿವರಣೆಯನ್ನು ನೀಡದಿದ್ದರೂ, ನಟಿ ಭಾವನಾ ಮೊದಲ ಬಾರಿಗೆ ವಿಚ್ಛೇದನದ ವದಂತಿಯ ಬಗ್ಗೆ ಮಾತನಾಡಿದ್ದಾರೆ. ತಮ್ಮ ಕುರಿತು ಕೇಳಿ ಬಂದ ಸುದ್ದಿಗೆ ಪ್ರತಿಕ್ರಿಯಿಸಿದ್ದಾರೆ.
ನಾನು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿಲ್ಲ. ನನ್ನ ವೈಯಕ್ತಿಕ ಜೀವನದ ಬಗ್ಗೆ ನಾನು ಹೆಚ್ಚು ಹಂಚಿಕೊಂಡಿಲ್ಲ. ನಾನು ನನ್ನ ಪತಿಯೊಂದಿಗೆ ಫೋಟೋಗಳನ್ನು ಏಕೆ ಹಂಚಿಕೊಳ್ಳುವುದಿಲ್ಲ. ಅದರಲ್ಲಿ ಸಮಸ್ಯೆ ಏನು ಎಂದು ಅವರು ಪ್ರಶ್ನಿಸುತ್ತಾರೆ.
ಇದರಿಂದಾಗಿ ನಾವು ವಿಚ್ಛೇದನ ಪಡೆದಿದ್ದೇವೆ. ನಾನು ನನ್ನ ಗಂಡನಿಂದ ಬೇರ್ಪಟ್ಟಿದ್ದೇನೆ ಮತ್ತು ನಾನು ಒಬ್ಬಂಟಿಯಾಗಿದ್ದೇನೆ ಎಂದು ಅರ್ಥವಲ್ಲ. ನಾನೇಕೆ ಎಲ್ಲ ಗಾಸಿಪ್ಗೆ ಉತ್ತರ ನೀಡಬೇಕು ಎಂದು ಕೂಡಾ ನಟಿ ಪ್ರಶ್ನಿಸಿದ್ದಾರೆ.
ನಾನು ನನ್ನ ಗಂಡನ ಬಳಿಗೆ ಹೋಗಿ ನಮ್ಮ ಸಂಬಂಧದ ಫೋಟೋ ತೆಗೆದುಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಹಾಕಲು ಸಾಧ್ಯವಿಲ್ಲ, ನಾವು ಒಟ್ಟಿಗೆ ಇದ್ದೇವೆ ಎಂದು ಜನರಿಗೆ ತೋರಿಸಬೇಕಾಗಿಲ್ಲ. ಅದನ್ನು ನಾನು ಗಂಡನಲ್ಲಿ ಕೇಳುವುದು ಸರಿಯಲ್ಲ ಎಂದು ಭಾವನಾ ಹೇಳಿದ್ದಾರೆ.