ಖ್ಯಾತ ನಿರೂಪಕಿ ದಿವ್ಯಾ ಆಲೂರು ಅವರ ತಂದೆ ಪ್ರಸಿದ್ಧ ಜಾನಪದ ಹಾಡುಗಾರ, ಸಾಹಿತಿ, ಕನ್ನಡ ಪರ ಹೋರಾಟಗಾರ ಆಲೂರು ನಾಗಪ್ಪ ಅವರು ಕಳೆದ ಕೆಲ ದಿನಗಳ ಹಿಂದೆ ನಿಧನರಾಗಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಆಲೂರು ನಾಗಪ್ಪ ಅವರು ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಇದೀಗ ತಂದೆಯ ಅಂತ್ಯಕ್ರಿಯೆಯನ್ನು ಸ್ವತಃ ದಿವ್ಯಾ ಆಲೂರು ನಡೆಸಿದ್ದು ಈ ಬಗ್ಗೆ ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಆಲೂರು ನಾಗಪ್ಪ ಅವರ ಮಗಳಾದ ದಿವ್ಯಾ ಆಲೂರು ಅವರು ತಮ್ಮ ತಂದೆಯ ಅಂತ್ಯಕ್ರಿಯೆಯನ್ನು ಅವರೇ ನೆರವೇರಿಸಿದ್ದಾರೆ. ಹಿಂದು ಧರ್ಮದಲ್ಲಿ ಗಂಡು ಮಕ್ಕಳು ಮಾತ್ರ ಈ ಕಾರ್ಯ ಮಾಡುತ್ತಾರೆ. ಆದರೆ ತಮ್ಮ ತಂದೆಯ ಅಂತ್ಯಕ್ರಿಯೆಯನ್ನು ಖುದ್ದು ದಿವ್ಯಾ ಅವರೇ ಮಾಡಿದ್ದು, ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ದಿವ್ಯಾ ಆಲೂರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಂತ್ಯಕ್ರಿಯೆ ಮಾಡಿದ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ದಿವ್ಯಾ ಆಲೂರು ಪೋಸ್ಟ್ ನೋಡಿದ ಜನರು ಒಬ್ಬ ತಂದೆಗೆ ಇನ್ನು ಎಂಥಹ ಮಗಳು ಸಿಗೋಕೆ ಸಾಧ್ಯ ಅಕ್ಕ. ನೀವು ನಮ್ಮ ಹೆಮ್ಮೆ. ನಿಮ್ಮ ನಿಲುವು ನಿಮ್ಮ ಧೈರ್ಯ ಅದೆಷ್ಟೋ ಹೆಣ್ಣು ಮಕ್ಕಳಿಗೆ ಇನ್ನೆಲ್ಲೋ ಬದುಕುವ ಧೈರ್ಯ ಆಗಿರಬಹುದು. ತಂದೆಯವರ ಆತ್ಮಕ್ಕೆ ಶಾಂತಿ ಸಿಗಲಿ. ದೇವರು ಇನ್ನಷ್ಟು ಶಕ್ತಿ ಕೂಡಲಿ ನಿಮಗೆ ಅಕ್ಕ, ಹದಿನೈದು ವರ್ಷಗಳ ಹಿಂದೆಯೇ ನನ್ನ ಅಮ್ಮ ದೈವಾಧೀನರಾದಾಗ, ನನ್ನ ತಂದೆ ನನಗಿರೋದು ಒಬ್ಬಳೇ ಮಗಳು ಅವಳೇ ಕಾರ್ಯಗಳನ್ನು ಮಾಡಲಿ ಅನ್ನೋ ನಿರ್ಧಾರ ಮಾಡಿದ್ರು. ನಾವು ಆಗ ಇದೇ ತರನಾದ ಮಾತುಗಳನ್ನ ಕೇಳ್ಬೇಕಾಯಿತು. ಬದಲಾವಣೆ ನಿಮ್ಮಿಂದಲೇ ನಡೆಯಲಿ ನಾನು ನಮ್ಮ ಅಪ್ಪ ಅಮ್ಮಗೆ ಒಬ್ಬಳೇ ಮಗಳು ನಮ್ಮ ಅಣ್ಣ ತೀರಿ ಹೋದರು ಅಪ್ಪ ಅಮ್ಮ ಜೊತೆ ನಾನೇ ಇರುವುದು ಹಾಗಾಗಿ ಎಲ್ಲಾ ಕರ್ತವ್ಯ ನನಗೆ ಸೇರಿದ್ದು, ನಿಮ್ಮನ್ನು ನೋಡಿ ನನಗೆ ಮತ್ತಷ್ಟು ಧೈರ್ಯ ಬಂದಿದೆ, ಈ ವಿಡಿಯೋ ನಿಮ್ಮ ಹತ್ತಿರ ಇಟ್ಟಕೊಬೇಡಿ ಇದರಿಂದ ಮತ್ತಿಷ್ಟು ನೋವು ನಿಮಗೆ ಮರಿಯುದಕ್ಕೆ ಆಗುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.