ಅಮೆರಿಕ ಅಧ್ಯಕ್ಷ ಜೋ ಬೈಡನ್ ಶ್ವೇತಭವನದಲ್ಲಿ ಸೋಮವಾರ ದೀಪಾವಳಿ ಆಚರಣೆ ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ದೇಶದಲ್ಲಿನ ಕಾಂಗ್ರೆಸಿಗರು, ಅಧಿಕಾರಿಗಳು ಮತ್ತು ಕಾರ್ಪೊರೇಟ್ ಅಧಿಕಾರಿಗಳು ಸೇರಿದಂತೆ 600ಕ್ಕೂ ಹೆಚ್ಚು ಅನಿವಾಸಿ ಭಾರತೀಯರು ಬೆಳಕಿನ ಹಬ್ಬದಲ್ಲಿ ಭಾಗಿಯಾಗಿ ಸಂಭ್ರಮಿಸಿದರು.
ಸಂಪ್ರದಾಯದಂತೆ ಬೈಡನ್ ಭಾಷಣಕ್ಕೂ ಮುನ್ನ ಬ್ಲೂ ರೂಮ್ನಲ್ಲಿ ದೀಪವನ್ನು ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಬೈಡನ್, ‘ಶ್ವೇತ ಭವನದಲ್ಲಿ ಅತಿದೊಡ್ಡ ದೀಪಾವಳಿ ಆಚರಣೆ ಆಯೋಜಿಸಿರುವುದಕ್ಕೆ ಹೆಮ್ಮೆಯಿದೆ’ ಎಂದರು.
ಇದೇ ವೇಳೆ, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ನಾಸಾ ಗಗನಯಾತ್ರಿ ಮತ್ತು ನಿವೃತ್ತ ನೌಕಾಪಡೆಯ ಕ್ಯಾಪ್ಟನ್ ಸುನಿತಾ ವಿಲಿಯಮ್ಸ್ ಅವರ ವೀಡಿಯೊ ಸಂದೇಶವನ್ನು ಪ್ರಸ್ತುತಪಡಿಸಲಾಯಿತು.
ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವ ಕಾರಣ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ಪ್ರಥಮ ಮಹಿಳೆ ಡಾ. ಜಿಲ್ ಬೈಡನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ.