ಬೆಂಗಳೂರು: ಒಕ್ಕಲಿಗ ಸಮುದಾಯಕ್ಕೆ ಡಿಕೆ ಬ್ರದರ್ಸ್ ಕಳಂಕ ಎಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಟಿಕೆಟ್ ವಂಚಿತ ಪಿ.ಎನ್ ಕೃಷ್ಣಮೂರ್ತಿ ಅಸಮಾಧಾನ ಹೊರ ಹಾಕಿದ್ದಾರೆ. ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಮಾತನಾಡಿದ ಅವರು 5 ವರ್ಷದಲ್ಲಿ ಡಿ.ಕೆ ಸುರೇಶ ನಮ್ಮ ಕ್ಷೇತ್ರಕ್ಕೆ ಬಂದಿಲ್ಲ, ಕ್ಷೇತ್ರದ ಜನರ ಕಷ್ಟ ಸುಖ ಕೇಳೋಕೆ ಯಾರು ಬಂದಿಲ್ಲ, ಕೋವಿಡ್ ಸಂದರ್ಭದಲ್ಲಿ 35 ಸಾವಿರ ಜನರಿಗೆ ಕಿಟ್ ಗಳನ್ನು ನೀಡಿದ್ದೆನೆ. ನೀರಿಗೆ ಪಾಚಿ ವೈರಿ ಇದ್ದ ಹಾಗೆ ಡಿಕೆ ಶಿವಕುಮಾರ್ ಒಕ್ಕಲಿಗ ಜನಾಂಗಕ್ಕೆ ಕಳಂಕ ಎಂದು ಕಿಡಿಕಾರಿದರು. ಇನ್ನೂ ಈ ಬಾರಿ ಟಿಕೆಟ್ ಪಡೆದ ಧನಂಜಯ್ಯ ಅವರು 2 ಲಕ್ಷ ನೀಡಿ ಅರ್ಜಿ ಹಾಕಿದ ತಕ್ಷಣ ಟಿಕೆಟ್ ಕೊಟ್ಟಿದ್ದಾರೆ.
ದಾಸರಹಳ್ಳಿ ಜನ ಹೇಳುತ್ತಾರೆ ಟಿಕೆಟ್ ಮಾರಾಟವಾಗಿದೆ ಎಂದು. ಬ್ಲಾಕ್ ಅಧ್ಯಕ್ಷರಿಗೆ ಡಿಕೆ ಶಿವಕುಮಾರ್ ಧಮ್ಕಿ ಹಾಕುತ ಇದ್ದಾರೆ ಎಂದು ಆರೋಪಿಸಿದರು. ಇನ್ನೂ ಕ್ಷೇತ್ರದಲ್ಲಿ 2018ರಿಂದ 2023ರ ವರೆಗೂ ಕೆಲಸ ಮಾಡಿಕೊಂಡು ಬಂದಿದ್ದೇನೆ. ಕ್ಷೇತ್ರದಲ್ಲಿ ಚುನಾವಣಾ ಸರ್ವೇ ನೀವೇ ಮಾಡಿಸಿದ್ದೀರಾ, ಡೆಲ್ಲಿಯಿಂದ ಮಾಡಿದ್ದಾರೆ, ಆ ಸರ್ವೇಯಲ್ಲಿ ನನ್ನ ಹೆಸರೇ ಇರುವುದು. ಆದರೂ ಟಿಕೆಟ್ ಕೊಟ್ಟಿಲ್ಲ. ಕಾಂಗ್ರೆಸ್ ಪಕ್ಷದ ಸರ್ವೇ ಬರೀ ಬೋಗಸ್ ಎಂದು ಹರಿಹಾಯ್ದಿದ್ದಾರೆ. ಅಣ್ಣ ತಮ್ಮಂದಿರಿಬ್ಬರಿಂದ ಈ ಕಾಂಗ್ರೇಸ್ ಪಕ್ಷ ಇಲ್ಲ, ನೂರಾರು ಕೋಟಿ ಜನ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದ್ದಿದ್ದಾರೆ ಎಂದು ಡಿಕೆ ಬ್ರದರ್ ವಿರುದ್ಧ ಟಿಕೆಟ್ ವಂಚಿತ ಪಿಎನ್ ಕೃಷ್ಣ ಮೂರ್ತಿ ಆಕ್ರೋಶ ಹೊರ ಹಾಕಿದ್ದಾರೆ.